ಭಾನುವಾರ, ಏಪ್ರಿಲ್ 5, 2020
19 °C

ಶ್ರೀನಗರ: ಕೋವಿಡ್‌- 19 ಮತ್ತಿಬ್ಬರಲ್ಲಿ ದೃಢ, ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶ್ರೀನಗರ: ಕಾಶ್ಮೀರದಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದ್ದು, ಕಣಿವೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ.

ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಒಬ್ಬ ಮಹಿಳೆ ಹಾಗೂ ದೆಹಲಿಯಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ. ದೆಹಲಿಯಿಂದ ಬಂದ ವ್ಯಕ್ತಿ ವಿದೇಶಿ ಪ್ರವಾಸದ ವಿವರವನ್ನು ಕಲೆಹಾಕಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ತಿಳಿಸಿದ್ದಾರೆ.

ಮಂಗಳವಾರ ಸೋಂಕು ದೃಢಪಟ್ಟ ಇಲ್ಲಿನ ನಾತಿಪೋರಾ ಪ್ರದೇಶದ ಮಹಿಳೆ ಹಾಗೂ ಮಾರ್ಚ್‌ 19ರಂದು ದೃಢಪಟ್ಟ ಮೊದಲ ಸೋಂಕಿತ ಮಹಿಳೆಯು ಮಾರ್ಚ್‌ 16ರಂದು ಸೌದಿ ಅರೇಬಿಯಾದಿಂದ ಒಂದೇ ವಿಮಾನದಲ್ಲಿ ಶ್ರೀನಗರಕ್ಕೆ ಬಂದಿಳಿದಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದಲ್ಲಿ ಮೊದಲ ಬಾರಿಗೆ ಕೋವಿಡ್‌ –19 ಸೋಂಕು ದೃಢಪಟ್ಟು ಇಲ್ಲಿನ ಎಸ್‌ಕೆಐಎಂಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಮಂಗಳವಾರ ಗುಣಮುಖರಾಗಿದ್ದಾರೆ ಎಂದು ಶ್ರೀನಗರದ ಜಿಲ್ಲಾಧಿಕಾರಿ ಶಾಹೀದ್‌ ಇಕ್ಬಾಲ್‌ ಚೌಧರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)