ಹೆತ್ತವರನ್ನು ಧಿಕ್ಕರಿಸಿ ಮದುವೆಯಾದ ಜೋಡಿಗೆ ಥಳಿಸಿ, ಮೂತ್ರ ಕುಡಿಸಿದರು! 

7

ಹೆತ್ತವರನ್ನು ಧಿಕ್ಕರಿಸಿ ಮದುವೆಯಾದ ಜೋಡಿಗೆ ಥಳಿಸಿ, ಮೂತ್ರ ಕುಡಿಸಿದರು! 

Published:
Updated:

ನವದೆಹಲಿ: ಮಧ್ಯಪ್ರದೇಶದ ಅಲಿರಾಜ್‍ಪುರ್ ಎಂಬಲ್ಲಿ ಹೆತ್ತವರ ಸಮ್ಮತಿ ಇಲ್ಲದೆ ಮದುವೆಯಾದ ಜೋಡಿಯ ಬಟ್ಟೆ ಬಿಚ್ಚಿ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿದ ಪ್ರಕರಣ ನಡೆದಿದೆ.

ಈ ಜೋಡಿಯನ್ನು ಥಳಿಸುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದೆ. 23ರ ಹರೆಯದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಲಾಗಿದೆ.

ಹುಡುಗಿಯ ಹೆತ್ತವರ ಸಮ್ಮತಿ ಇಲ್ಲದೆ ಈ ಜೋಡಿ ಮೇ ತಿಂಗಳಲ್ಲಿ  ಮದುವೆಯಾಗಿದ್ದರು. ಹುಡುಗಿಯ ಮನೆಯ ಗೌರವಕ್ಕೆ ಧಕ್ಕೆ ತಂದಿದ್ದಕ್ಕೆ ಯುವ ಜೋಡಿಗೆ ಈ ಶಿಕ್ಷೆ ನೀಡಲಾಗಿದೆ.

ಹುಡುಗಿಯನ್ನು ಮದುವೆ ಆದ ಬಳಿಕ ಆ ಯುವಕ ₹70,000 ನಗದು ಮತ್ತು 2 ಮೇಕೆಗಳನ್ನು ನೀಡಿ ಮದುವೆ ವಿಚಾರದಲ್ಲಿ ನಡೆದ ಜಗಳ ಇತ್ಯರ್ಥ ಮಾಡಲು ಪ್ರಯತ್ನಿಸಿದ್ದನು.

ಕಳೆದ ವಾರ ಈ ದಂಪತಿಗಳು ಗುಜರಾತಿಗೆ ಹೋಗಿದ್ದರು. ಅಲ್ಲಿಂದ ಬಂದ ನಂತರ ಜುಲೈ 25ರಂದು ಇವರನ್ನು ಗನ್ ತೋರಿಸಿ ಅಪಹರಣ ಮಾಡಲಾಗಿತ್ತು. ಈ ಎಲ್ಲ ಕೃತ್ಯಗಳು ಹುಡುಗಿಯ ಮನೆಯವರೇ ಮಾಡಿಸಿದ್ದು ಎಂದು ಶಂಕಿಸಲಾಗಿದೆ.

ಅಲ್ಲಿಂದ ಬಂಧಮುಕ್ತವಾದ ಕೂಡಲೇ ಈ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರಿಗೂ ತೀವ್ರವಾಗಿ ಥಳಿಸಿದ ನಂತರ ಹುಡುಗಿಯ ಕೂದಲು ಕತ್ತರಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !