ಅಧಿವೇಶನ: 11ಕ್ಕೆ ಸರ್ವಪಕ್ಷ ಸಭೆ

7

ಅಧಿವೇಶನ: 11ಕ್ಕೆ ಸರ್ವಪಕ್ಷ ಸಭೆ

Published:
Updated:

ನವದೆಹಲಿ: ಸಂಸತ್ ಕಲಾಪವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಅಧಿವೇಶನದ ಮೊದಲ ದಿನ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಚಳಿಗಾಲದ ಅಧಿವೇಶನ ಡಿಸೆಂಬರ್‌11ರಿಂದ ಜನವರಿ 8ರ ತನಕ ನಡೆಯಲಿದ್ದು, ಲೋಕಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಪೂರ್ಣಪ್ರಮಾಣದ ಅಧಿವೇಶನ ಇದಾಗಲಿದೆ. ಅದೇ ದಿನ ಐದು ರಾಜ್ಯಗಳ ಫಲಿತಾಂಶವೂ ಹೊರಬೀಳಲಿದೆ.

ಮತ್ತೊಂದೆಡೆ ಮೇಲ್ಮನೆಯ ಕಲಾಪ ಸುಗಮವಾಗಿ ನಡೆಯುವ ಸಲುವಾಗಿ ಡಿಸೆಂಬರ್‌ 10ರಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !