ಶನಿವಾರ, ಜೂಲೈ 11, 2020
23 °C

ಸೆಲ್ಫ್ ಕ್ವಾರಂಟೈನ್‌ಗೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಪಿಟಿಐ Updated:

ಅಕ್ಷರ ಗಾತ್ರ : | |

Arvind kejriwal

ದೆಹಲಿ: ಗಂಟಲು ನೋವು ಮತ್ತು ಜ್ವರ ಕಾಣಿಸಿಕೊಂಡ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೆಲ್ಫ್ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ್ದು, ಮಂಗಳವಾರ ಅವರು ಕೋವಿಡ್-19 ಪರೀಕ್ಷೆಗೊಳಪಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಜ್ರಿವಾಲ್ ಅವರಿಗೆ ಡಯಾಬಿಟೀಸ್ ಕೂಡಾ ಇದೆ. ಭಾನುವಾರ ಮಧ್ಯಾಹ್ನದಿಂದ ಅವರಿಗೆ ಗಂಟಲು ನೋವು ಮತ್ತು ಸಣ್ಣ ಜ್ವರ ಇತ್ತು. ಮಂಗಳವಾರ ಬೆಳಗ್ಗೆ ಕೋವಿಡ್-19 ಪರೀಕ್ಷೆ ನಡೆಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಕೇಜ್ರಿವಾಲ್ ಕಚೇರಿಯ ಮೂಲಗಳು ಹೇಳಿವೆ.

ಭಾನುವಾರ ಬೆಳಗ್ಗೆ ಅವರು ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದು ಅದರ ನಂತರ ಯಾವುದೇ ಸಭೆಯಲ್ಲಿ ಭಾಗಿಯಾಗಿಲ್ಲ, ಕಳೆದ ಎರಡು ತಿಂಗಳಿನಿಂದ ಕೇಜ್ರಿವಾಲ್ ವಿಡಿಯೊ ಸಂವಾದದ ಮೂಲಕ ಮಾತ್ರ ಸಭೆ ನಡೆಸುತ್ತಿದ್ದಾರೆ.

ಅರವಿಂದ ಕೇಜ್ರಿವಾಲ್ ಗುಣಮುಖರಾಗಲಿ ಎಂದು ಹಾರೈಸಿದ ಟ್ವೀಟಿಗರು

ಕೇಜ್ರಿವಾಲ್ ಬೇಗನೆ ಗುಣಮುಖರಾಗಲಿ ಎಂದು ಟ್ವೀಟಿಗರು ಹಾರೈಸುತ್ತಿದ್ದು  #TakeCareAK ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು