ಭಾನುವಾರ, ಆಗಸ್ಟ್ 1, 2021
26 °C

ದೆಹಲಿ | ಕೋವಿಡ್‌-19: ಮೊದಲ ಪ್ಲಾಸ್ಮಾ ಬ್ಯಾಂಕ್‌ ಕಾರ್ಯಾಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ದೆಹಲಿಯಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್‌ ಗುರುವಾರದಿಂದ ಕಾರ್ಯಾರಂಭಿಸಿದೆ.

ಕೋವಿಡ್‌–19ರಿಂದ ಚೇತರಿಸಿಕೊಂಡ 14 ದಿನಗಳ ಬಳಿಕ ರೋಗಿಗಳು ತಮ್ಮ ಪ್ಲಾಸ್ಮಾ ದಾನ ಮಾಡಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದರು.

ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದ ಅವರು, ಪ್ಲಾಸ್ಮಾ ದಾನ ಮಾಡಬಯಸುವವರು ಸಹಾಯವಾಣಿ ಸಂಖ್ಯೆ (1031 ಮತ್ತು 8800007722) ಸಂಪರ್ಕಿಸುವಂತೆ ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಇನ್‌ಸ್ಟಿಟ್ಯೂಟ್‌ ಆಫ್‌ ಲಿವರ್‌ ಅಂಡ್‌ ಬಿಲಿಯರಿ ಸೈನ್ಸ್‌ ಆವರಣದಲ್ಲಿ ಪ್ಲಾಸ್ಮಾ ಬ್ಯಾಂಕ್ ಅನ್ನು ಸರ್ಕಾರ ಸ್ಥಾಪಿಸಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್‌ ರೋಗಿಗಳ ಸಾವುಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಆಶಿಸಿದರು.

18ರಿಂದ 60 ವರ್ಷದೊಳಗಿನವರು ಮತ್ತು 50 ಕೆ.ಜಿ ಗಿಂತ ಹೆಚ್ಚು ತೂಕ ಹೊಂದಿರುವವರು ತಮ್ಮ ಪ್ಲಾಸ್ಮಾವನ್ನು ಕೋವಿಡ್‌ ರೋಗಿಗಳಿಗೆ ದಾನ ಮಾಡಬಹುದು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು