ಮಂಗಳವಾರ, ಆಗಸ್ಟ್ 20, 2019
24 °C

ರಾಂಪುರ ಉಪಚುನಾವಣೆ ಡಿಂಪಲ್ ಸ್ಪರ್ಧೆ?

Published:
Updated:
Prajavani

ಲಖನೌ: ಮುಂಬರುವ ರಾಂಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರು ಸ್ಪರ್ಧಿಸುವ ಸಾಧ್ಯತೆಯಿದೆ. 

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಂಪ್ರದಾಯಿಕ ಕ್ಷೇತ್ರ ಕನೌಜ್‌ನಲ್ಲಿ ಸೋತಿದ್ದ ಡಿಂಪಲ್, ವಿಧಾನಸಭೆ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂದು ಮೂಲಗಳು ತಿಳಿಸಿವೆ. 

ಸುರಕ್ಷಿತ ಕ್ಷೇತ್ರ ರಾಂಪುರದಿಂದ ಡಿಂಪಲ್ ಕಣಕ್ಕಿಳಿಸುವಂತೆ ಪಕ್ಷದಲ್ಲಿ ಒತ್ತಡವಿದೆ. ಆದರೆ ಪಕ್ಷ ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಬಿಜೆಪಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ.

Post Comments (+)