ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ

Last Updated 28 ಫೆಬ್ರುವರಿ 2019, 6:38 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶಪ್ರೇಮದ ಹೆಸರಿನಲ್ಲಿ ನಾವು ಮಾಡುವ ಹುಚ್ಚುಗಳು ನಮ್ಮ ಸೈನಿಕರು, ಅವರ ಕುಟುಂಬಗಳನ್ನು ಅಪಾಯಕ್ಕೆ ದೂಡುತ್ತವೆ. ಅಷ್ಟೇ ಅಲ್ಲ ಬಲು ನಾಜೂಕಾಗಿ ಹೆಣೆದಸಶಸ್ತ್ರಪಡೆಗಳ ಕಾರ್ಯಾಚರಣೆಯನ್ನೇ ಹಾಳು ಮಾಡುತ್ತವೆ. ಇನ್ನಾದರೂ ನಮ್ಮ ಸಮೂಹ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಾವುಗಳುಸಶಸ್ತ್ರಪಡೆಗಳ ಮಾಹಿತಿ ಪ್ರಕಟಿಸುವಾಗಸಂಯಮ ವಹಿಸಬೇಕಿದೆ...’

–ಕಾರ್ಗಿಲ್ ಯುದ್ಧವನ್ನು ಜಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ,ದೇಶದ ವಿವಿಧ ಸೈನಿಕ ತರಬೇತಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ, ಸೇನೆಯ ಯುವ ಸೈನಿಕರು ಮತ್ತು ಅಧಿಕಾರಿಗಳೊಂದಿಗೆ ಇಂದಿಗೂ ಆಪ್ತ ಒಡನಾಟ ಇಟ್ಟುಕೊಂಡಿರುವ, ಪ್ರಚಾರದ ಹಂಬಲವಿಲ್ಲದೆ ದೇಶದ ರಕ್ಷಣಾ ವಿಚಾರಗಳಲ್ಲಿ ತಮ್ಮ ಒಳನೋಟ ಹಂಚಿಕೊಳ್ಳುವ ಉತ್ತರ ಕರ್ನಾಟಕ ಮೂಲದ ನಿವೃತ್ತ ಸೇನಾಧಿಕಾರಿಯೊಬ್ಬರು ತಮ್ಮ ಹೆಸರು ಬರೆಯಬಾರದು ಎನ್ನುವ ಷರತ್ತಿನೊಂದಿಗೆ ಹಂಚಿಕೊಂಡ ಅಭಿಪ್ರಾಯವಿದು. ಭಾರತೀಯ ಸೇನೆಯು ಇಂದಿಗೂ ಹಲವು ವಿಚಾರಗಳಲ್ಲಿ ಇವರ ಅಭಿಪ್ರಾಯವನ್ನು ಗೌರವದಿಂದ ಪರಿಗಣಿಸುತ್ತದೆ.

ಫೆ.28ರಂದು ಪತ್ರಿಕೆಯೊಂದರಲ್ಲಿ ಚಿತ್ರಸಹಿತ ಪ್ರಕಟವಾಗಿದ್ದ ಸುದ್ದಿಯ ತುಣುಕು ಅವರ ಬೇಸರಕ್ಕೆ ಕಾರಣ. ರಜೆಗೆಂದು ಹೈದರಾಬಾದ್ ಕರ್ನಾಟಕದ ನಗರಕ್ಕೆ ಬಂದಿದ್ದ ಯೋಧನೊಬ್ಬ ಕರ್ತವ್ಯದ ಕರೆಯ ಮೇರೆಗೆ ದಿಢೀರ್ ತನ್ನ ನೆಲೆಗೆ ಹಿಂದಿರುಗಿದ ಸುದ್ದಿಯನ್ನು ಅವರು ಉಲ್ಲೇಖಿಸಿದರು.

‘ಅಲ್ಲ ಕಣಪ್ಪ, ಯೋಧರ ಮತ್ತು ವಿಶೇಷ ರೈಲುಗಳ ಸಂಚಾರ ಮಾಹಿತಿಯನ್ನು ಗೌಪ್ಯವಾಗಿಡಬೇಕು ಅಂತರೈಲ್ವೆ ಇಲಾಖೆಯೇ ತನ್ನ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿದೆ. ಹೀಗಿರುವಾಗ ಸಮೂಹಮಾಧ್ಯಮದಲ್ಲಿಆ ಯೋಧನ ಹೆಸರೇನು? ಅವನುಯಾವ ರೈಲಿನಲ್ಲಿ ಕರ್ನಾಟಕದ ಯಾವ ನಿಲ್ದಾಣದಿಂದ ಮಹಾರಾಷ್ಟ್ರದ ಯಾವ ನಿಲ್ದಾಣಕ್ಕೆತೆರಳುತ್ತಾನೆ? ಅಲ್ಲಿಂದ ಎಂದು ವಿಶೇಷ (ಸೇನೆ)ರೈಲಿನಲ್ಲಿ ಶ್ರೀನಗರ ತಲುಪುತ್ತಾನೆ ಎನ್ನುವ ಸೂಕ್ಷ್ಮ ವಿವರಗಳು ಪ್ರಕಟವಾದರೆ ಹೇಗೆ? ಇದು ಸಾಲದೆನ್ನುವಂತೆ ಸಮವಸ್ತ್ರದಲ್ಲಿರುವ ಯೋಧನ ಜೊತೆಗೆ ಇಡೀ ಕುಟುಂಬದ ಚಿತ್ರವನ್ನು ಪ್ರಕಟಿಸಲಾಗಿದೆ. ಇದರಿಂದ ಏನೆಲ್ಲಾಅಪಾಯ ಆಗಬಹುದು ಎನ್ನುವಅರಿವು ನಿಮಗೆ (ಮಾಧ್ಯಮದವರಿಗೆ) ಇದೆಯೇ’ ಎಂದು ಅವರು ಪ್ರಶ್ನಿಸಿದರು.

‘ಸಶಸ್ತ್ರಪಡೆಗಳು ತಮ್ಮ ಸಿಬ್ಬಂದಿಗಾಗಿಸಾಮಾಜಿಕ ಮಾಧ್ಯಮ ನೀತಿ ಸಂಹಿತೆಯನ್ನು ರೂಪಿಸಿಕೊಂಡಿವೆ. ನಮ್ಮ ದೇಶ ಚೆನ್ನಾಗಿರಬೇಕೆಂದು ಬಯಸುವ ಎಲ್ಲರೂ ಇದನ್ನು ಅರಿತುಕೊಳ್ಳಬೇಕು, ಅನುಸರಿಸಬೇಕು.ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು’ ಎಂದು ಅವರು ಸಲಹೆ ಮಾಡಿದರು.

ಸಶಸ್ತ್ರಪಡೆಗಳ ಸಾಮಾಜಿಕ ಮಾಧ್ಯಮ ಸಂಹಿತೆ

ಭಾರತೀಯ ಸೇನೆಯು ಡಿಸೆಂಬರ್ 2014ರಲ್ಲಿ ಸೈನಿಕರು ತಮ್ಮ ಸೇವಾ ಅವಧಿಯಲ್ಲಿ ಅನುಸರಿಸಬೇಕಾದಸಾಮಾಜಿಕ ಮಾಧ್ಯಮ ಸಂಹಿತೆಯನ್ನು ಪ್ರಕಟಿಸಿತು.2016ರ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿ ಮತ್ತು ವಾಯುಪಡೆಯ ಸಿಬ್ಬಂದಿಯೊಬ್ಬರು ಹನಿಟ್ರ್ಯಾಪ್‌ನಲ್ಲಿ ಸಿಲುಕಿಕೊಂಡ ನಂತರ ಸಂಹಿತೆಯನ್ನುಮತ್ತೊಮ್ಮೆ ಅಪ್‌ಡೇಟ್ ಮಾಡಲಾಯಿತು.

ಸಾಮಾಜಿಕ ಮಾಧ್ಯಮ ಸಂಹಿತೆಯ ಪ್ರಮುಖ ಅಂಶಗಳು ಇವು...

1) ಅರ್ಧಸತ್ಯಗಳನ್ನು ಹರಿಬಿಡುವ ಮೂಲಕ ದೇಶದ ಸಶಸ್ತ್ರಪಡೆಗಳ ಘನತೆ ಮಣ್ಣುಪಾಲು ಮಾಡುವ ಯತ್ನದ ಬಗ್ಗೆ ಎಚ್ಚರದಿಂದಿರಿ. ಯಾವುದೇಪೋಸ್ಟ್‌ ಒಪ್ಪಿಕೊಳ್ಳುವ, ಶೇರ್ ಅಥವಾ ಫಾರ್ವಾರ್ಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಿ. ಈ ನಿಯಮವು ಎಲ್ಲ ಸೇವಾನಿರತ ಹಾಗೂ ನಿವೃತ್ತ ಸಿಬ್ಬಂದಿಗೆ ಅನ್ವಯಿಸುತ್ತದೆ.

2) ಸೇನೆಗೆ ಸಂಬಂಧಿಸಿದ ಯಾವುದೇ ಸೋಷಿಯಲ್ ಪೋಲಿಂಗ್‌ಗಳಲ್ಲಿ(ಸಾಮಾಜಿಕ ಮಾಧ್ಯಮಗಳಲ್ಲಿ ಜನಮತಗಣನೆ) ಪಾಲ್ಗೊಳ್ಳಬೇಡಿ. ಸೇನೆಯವಿಶ್ವಾಸಾರ್ಹತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಗ್ರೂಪ್‌ಗಳಿಂದ ದೂರವಿರಿ. ಧಾರ್ಮಿಕ, ರಾಜಕೀಯ, ವಿದೇಶಿ ಮಿಲಿಟರಿ ನೆಟ್‌ವರ್ಕ್ ಮತ್ತು ದೇಶದ ಜನರಲ್ಲಿದ್ವೇಷ ಹರಡಲು ಬಳಕೆಯಾಗುವಫೇಸ್‌ಬುಕ್‌ ಗ್ರೂಪ್‌ಗಳನ್ನು ಸೇರಬೇಡಿ.

3) ಸಮವಸ್ತ್ರ, ರೆಜಿಮೆಂಟ್‌ಗಳುಖಂಡಿತ ನಮಗೆ (ಸೈನಿಕರಿಗೆ) ಹೆಮ್ಮೆ ಕೊಡುವ ಸಂಗತಿ. ಹಾಗೆಂದು ಸಮವಸ್ತ್ರದಲ್ಲಿರುವ ಚಿತ್ರಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್ ಮಾಡಿಕೊಳ್ಳುವುದು ಅಥವಾ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವುದು ಸಲ್ಲದು.

4) ಬಹುಮಾನದ ಆಮಿಷ ಒಡ್ಡುವ ವೆಬ್‌ಸೈಟ್‌ಗಳು, ಸಮೀಕ್ಷೆಗಳಿಂದ ದೂರ ಇರಿ. ನಿಮ್ಮ ಕುಟುಂಬದ ಸದಸ್ಯರು ಮತ್ತು ಗೆಳೆಯರಿಗೂ ನಿಮ್ಮ ಸೇವಾ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ತಿಳಿಸಿರಿ.

5) ನೀವು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸ್ಥಳ,ಪಾಲ್ಗೊಳ್ಳುತ್ತಿರುವ ಕಾರ್ಯಾಚರಣೆಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.ಆಯುಧ ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡುವುದು ತಪ್ಪು. ನೀವು ಸಾಮಾನ್ಯ ಉಡುಗೆಯಲ್ಲಿದ್ದರೂ ಸರಿ, ಆಯುಧ ಹಿಡಿದಿರುವ ಚಿತ್ರ ಪೋಸ್ಟ್ ಮಾಡುವಂತಿಲ್ಲ.

7) ನಿಮ್ಮ ಹುದ್ದೆ ಮತ್ತು ಬೆಟಾಲಿಯನ್ ಮಾಹಿತಿ ಸಾಮಾಜಿಕ ಮಾಧ್ಯಮಕ್ಕೆ ಬರುವುದು ಬೇಡ. ಅದೂ ಸಹ ಗೌಪ್ಯವಾಗಿರಬೇಕು. ಹಿನ್ನೆಲೆಯ ಚಿತ್ರಗಳಾಗಿ ಕಾರ್ಯಾಚರಣೆ ಅಥವಾ ಸೇನಾನೆಲೆಯ ಚಿತ್ರಗಳನ್ನು ಬಳಸಬೇಡಿ (ಇದೇ ಕಾರಣಕ್ಕೆ ಪಾಕ್‌ಗೆ ಸೆರೆ ಸಿಕ್ಕ ಪೈಲಟ್ ಅಭಿನವ್ ತಮ್ಮ ಸ್ಕ್ವಾರ್ಡನ್ ಹೆಸರು ಹೇಳಲಿಲ್ಲ. ಆದರೆ ಭಾರತದ ಮಾಧ್ಯಮಗಳು ಅದನ್ನು ಪ್ರಕಟಿಸಿದವು).

8) ಪರಿಚಯವಿಲ್ಲದವರ ಫ್ರೆಂಡ್ ರಿಕ್ವೆಸ್ಟ್‌ ಒಪ್ಪಿಕೊಳ್ಳಬೇಡಿ.

9) ಈ ನಿಯಮಗಳು ಕೇವಲ ಸೈನಿಕರಿಗೆ ಮಾತ್ರವೇ ಅಲ್ಲ. ಅವರ ಕುಟುಂಬ ಮತ್ತು ಗೆಳೆಯರಿಗೂ ಅನ್ವಯಿಸುತ್ತದೆ. ತಮ್ಮ ಕುಟುಂಬದ ಸದಸ್ಯರೊಬ್ಬರು ಸೇನೆಯ ಇಂಥ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವಗುರುತು ಬಿಟ್ಟುಕೊಡದಂತೆಇವರೆಲ್ಲರೂ ಎಚ್ಚರವಹಿಸಬೇಕಿದೆ.

10) ನಿಮ್ಮ ವೈಯಕ್ತಿಕ ಲ್ಯಾಪ್‌ಟಾಪ್,ಡೆಸ್ಕ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಎಂದಿಗೂ ಸಶಸ್ತ್ರಪಡೆಗಳಿಗೆ ಸಂಬಂಧಿಸಿದರಹಸ್ಯ ಮಾಹಿತಿಯನ್ನು ಸೇವ್ ಮಾಡಲೇಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT