ಸೋಮವಾರ, ಸೆಪ್ಟೆಂಬರ್ 27, 2021
29 °C

ಮತದಾನದ ನಂತರ ನಿಷೇಧ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ನಿಂದಾನಾತ್ಮಕ ಭಾಷೆ ಬಳಸಿದ ಕಾರಣಕ್ಕೆ ಗುಜರಾತ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜೀತೂಭಾಯಿ ವಘಾನಿ ಅವರ ಮೇಲೆ ಚುನಾವಣಾ ಆಯೋಗವು 72 ಗಂಟೆಗಳ ನಿಷೇಧ ಹೇರಿದೆ. ಆದರೆ ಗುಜರಾತ್‌ನಲ್ಲಿ ಮತದಾನ ಮುಗಿದು ಒಂದು ವಾರ ಕಳೆದ ನಂತರ ಆಯೋಗವು ಈ ಆದೇಶ ಹೊರಡಿಸಿದೆ.

ಸೂರತ್‌ನ ಅಮ್ರೋಲಿಯಲ್ಲಿ ಏಪ್ರಿಲ್‌ 7ರಂದು ನಡೆದ ರ‍್ಯಾಲಿಯಲ್ಲಿ ಭಾಷಣ ಮಾಡುವ ವೇಳೆ ವಘಾನಿ ಅವರು ನಿಂದನಾತ್ಮಕ ಭಾಷೆ ಬಳಸಿದ್ದರು. ಅವರ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿತ್ತು. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಗುಜರಾತ್‌ನ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆದಿದೆ. ಮತದಾನ ನಡೆದ ಏಳು ದಿನಗಳ ನಂತರ ಆಯೋಗವು ವಘಾನಿ ಮೇಲೆ ನಿಷೇಧದ ಆದೇಶ ನೀಡಿದೆ. ನಿಷೇಧವು ಮೇ 2ರ ಸಂಜೆ 4 ಗಂಟೆಯಿಂದ ಜಾರಿಯಾಗಲಿದೆ.

‘ವಘಾನಿ ಅವರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ, ರ‍್ಯಾಲಿ ಮತ್ತು ಮಾಧ್ಯಮಗಳ ಎದುರು ಮಾತನಾಡುವಂತಿಲ್ಲ’ ಎಂದು ಆಯೋಗವು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.