ಸುಳ್ಳುಸುದ್ದಿ ಪರಿಶೀಲನೆಗೆ ಫೇಸ್‌ಬುಕ್ ತಂತ್ರ

7

ಸುಳ್ಳುಸುದ್ದಿ ಪರಿಶೀಲನೆಗೆ ಫೇಸ್‌ಬುಕ್ ತಂತ್ರ

Published:
Updated:
Prajavani

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹರಡದಂತೆ ತಡೆಯಲು ಹಾಗೂ ಅಂತಹವುಗಳ ಪರಿಶೀಲನೆಗೆ ಫೇಸ್‌ಬುಕ್ ನಡೆಸಲು ಬಾಹ್ಯ ಸಂಸ್ಥೆಗಳ ನೆರವು ಪಡೆಯಲು ‍ಮುಂದಾಗಿದೆ.

ಫೇಸ್‌ಬುಕ್ ಜೊತೆ ಇಂಡಿಯಾ ಟುಡೇ ಗ್ರೂಪ್, ವಿಶ್ವಾಸ್ ಡಾಟ್ ನ್ಯೂಸ್, ನ್ಯೂಸ್‌ಮೊಬೈಲ್, ಫ್ಯಾಕ್ಟ್ ಕ್ರೆಸೆಂಡೊ ಸಂಸ್ಥೆಗಳು ಕೈಜೋಡಿಸಿವೆ. ಇವು ಸ್ವತಂತ್ರವಾಗಿದ್ದು, ಸತ್ಯಾಸತ್ಯತೆ ಪರಿಶೀಲನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಸಂಸ್ಥೆಗಳಾಗಿವೆ.

ಸೋಮವಾರದಿಂದಲೇ ಇವು ಕಾರ್ಯಾರಂಭ ಮಾಡಿದ್ದು, ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲನೆ ನಡೆಸಿ, ಅವುಗಳ ಸತ್ಯಾಸತ್ಯತೆಯ ಮಟ್ಟವನ್ನು ನಿಗದಿಪಡಿಸಲಿವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ರಕಟವಾಗುವ ಮಾಹಿತಿಗಳೂ ಪರಿಶೀಲನೆಗೆ ಒಳಪಡಲಿವೆ. 

ಫೊಟೊ ಮತ್ತು ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸುವ ಕೆಲವು ಟೂಲ್‌ಗಳನ್ನು ಫೇಸ್‌ಬುಕ್ ಅಳವಡಿಸಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !