ಶುಕ್ರವಾರ, ಸೆಪ್ಟೆಂಬರ್ 20, 2019
21 °C

ವಿವಾದಾತ್ಮಕ ಹೇಳಿಕೆ: ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

Published:
Updated:
Prajavani

ಸಂಭಾಲ್‌/ಯುಪಿ (ಪಿಟಿಐ): ‌ ‘ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐನಿಂದ ಬಿಜೆಪಿ ಮತ್ತು ಬಜರಂಗದಳ ಹಣ ಪಡೆದಿವೆ’ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಬಿಜೆಪಿ ನಗರ ಘಟಕದ ಮುಖಂಡ ಸತೀಶ್‌ ಅರೋರಾ ಅವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಸಬ್‌ ಇನ್‌ಸ್ಪೆಕ್ಟರ್‌ ರಾಜೇಶ್‌ ಕುಮಾರ್‌ ಪಾಂಡೆ ನಡೆಸ ಲಿದ್ದಾರೆ. ‘ಬಿಜೆಪಿ, ಬಜರಂಗದಳ ಹಣ ಪಡೆದಿವೆ. ಇದರತ್ತ ಗಮನಹರಿಸಿ. ಪಾಕಿಸ್ತಾನ ಪರ ಮುಸ್ಲಿಂರಿಗಿಂತಲೂ, ಮುಸ್ಲಿಂಯೇತರರೇ ಹೆಚ್ಚು ಗೂಢಚಾರಿಕೆ ಮಾಡುತ್ತಿದ್ದಾರೆ. ತಿಳಿದುಕೊಳ್ಳಿ’ ಎಂದು  ಸುದ್ದಿಗಾರರಿಗೆ ಸಿಂಗ್‌ ತಿಳಿಸಿದ್ದರು.

Post Comments (+)