ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಬಾರಿಗೆ ವಿಮಾನ ಹತ್ತಿದ ವಲಸೆ ಕಾರ್ಮಿಕರು!

10 ವಲಸೆ ಕಾರ್ಮಿಕರಿಗಾಗಿ ವಿಮಾನದ ಟಿಕೆಟ್ ಖರೀದಿಸಿದ ರೈತ
Last Updated 28 ಮೇ 2020, 20:30 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ಸಿಲುಕಿದ್ದ ಬಿಹಾರದ ಸಮಸ್ತಿಪುರದ 10 ಕೃಷಿ ಕಾರ್ಮಿಕರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಿದರು.

ದೆಹಲಿಯ ಅಣಬೆ ಕೃಷಿಕ ಪಪ್ಪನ್ ಸಿಂಗ್ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಈ ಕೃಷಿಕಾರ್ಮಿಕರಿಗೆ ದೆಹಲಿಯಿಂದ ಪಟ್ನಾ ತನಕ ವಿಮಾನಯಾನದ ಟಿಕೆಟ್ ಬುಕ್ ಮಾಡಿದ್ದರು. ಮಾಲೀಕನ ಕಾರಣದಿಂದ ಮೊದಲ ಬಾರಿಗೆ ವಿಮಾನಯಾನ ಮಾಡುವ ಅವಕಾಶ ಪಡೆದಿದ್ದ ಈ ಕೃಷಿ ಕಾರ್ಮಿಕರು ತಮ್ಮ ಯಾನದ ಅನುಭವಗಳನ್ನು ಮಾಧ್ಯಮಗಳ ಎದುರು ಹೇಳಿಕೊಂಡರು.

ವಿಮಾನದ ಟಿಕೆಟ್ ಖರೀದಿಸಿ ತಮ್ಮನ್ನು ವಿಮಾನ ಹತ್ತುವ ತನಕ ಜತನವಾಗಿ ನೋಡಿಕೊಂಡ ಮಾಲೀಕ ಪಪ್ಪನ್ ಸಿಂಗ್ ಸಹಾಯಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು.

ಪಪ್ಪನ್ ಪ್ರತಿ ಕೃಷಿ ಕಾರ್ಮಿಕನಿಗೂ ₹ 68 ಸಾವಿರದ ಟಿಕೆಟ್ ಕಾಯ್ದಿರಿಸಿದ್ದಲ್ಲದೇ, ತಲಾ ₹ 3 ಸಾವಿರವನ್ನೂ ನೀಡಿದ್ದರು.

‘ರಸ್ತೆ ಮತ್ತು ರೈಲುಗಳಲ್ಲಿ ವಲಸೆ ಕಾರ್ಮಿಕರ ಸಂಕಟ ನೋಡಿದ್ದೆ. ನನ್ನ ಬಳಿಯ ಕಾರ್ಮಿಕರಿಗೆ ಈ ಸಮಸ್ಯೆ ಅಗಬಾರದು ಎಂದು ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿಸಿದೆ. ಎಲ್ಲರಂತೆ ಅವರೂ ಗೌರವಕ್ಕೆ ಅರ್ಹರು. ಅವರು ಸುರಕ್ಷಿತವಾಗಿ ತಮ್ಮೂರಿಗೆ ತಲುಪಿದ್ದಾರೆಂದು ತಿಳಿದು ಸಂತಸವಾಯಿತು’ ಎಂದು ಪಪ್ಪನ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT