ಸಂದರ್ಭಾನುಸಾರ ದರ ಏರಿಳಿಕೆ ವ್ಯವಸ್ಥೆ ಪರಿಶೀಲನೆಗೆ ರೈಲ್ವೆ ನಿರ್ಧಾರ

7

ಸಂದರ್ಭಾನುಸಾರ ದರ ಏರಿಳಿಕೆ ವ್ಯವಸ್ಥೆ ಪರಿಶೀಲನೆಗೆ ರೈಲ್ವೆ ನಿರ್ಧಾರ

Published:
Updated:

ನವದೆಹಲಿ: ಐಷಾರಾಮಿ ರೈಲುಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್‌ ದರ ಏರಿಸುವ ಮತ್ತು ಇಳಿಸುವ ಯೋಜನೆಯನ್ನು (ಫ್ಲೆಕ್ಸಿ ಫೇರ್‌ ಸಿಸ್ಟಂ) ಪುನರ್‌ಪರಿಶೀಲಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ. 

ಈ ರೈಲುಗಳ ಪ್ರಯಾಣ ದರ ಬಸ್‌ ಅಥವಾ ವಿಮಾನ ಪ್ರಯಾಣ ದರಕ್ಕಿಂತಲೂ ಹೆಚ್ಚಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈ ರೈಲುಗಳಲ್ಲಿನ ಪ್ರಯಾಣಕ್ಕಿಂತಲೂ ವಿಮಾನ ಪ್ರಯಾಣ ಅಗ್ಗವಾಗಿದೆ ಎಂದು ಸಿಎಜಿ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. 

ಶೇ 40ಕ್ಕಿಂತಲೂ ಕಡಿಮೆ ಸೀಟುಗಳು ಭರ್ತಿಯಾಗುವ ಕೆಲವು ಮಾರ್ಗಗಳಲ್ಲಿ ಈ ಯೋಜನೆ ಜಾರಿಯಲ್ಲಿತ್ತು. ಇದನ್ನು ರದ್ದು ಪಡಿಸಿ, ಕಡಿಮೆ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ನಾಲ್ಕು ದಿನ ಮೊದಲು ಟಿಕೆಟ್‌ ಕಾಯ್ದಿರಿಸಿದವರಿಗೆ ಶೇ 50ರಷ್ಟು ರಿಯಾಯಿತಿ ಘೋಷಿಸುವ ಬಗ್ಗೆ ರೈಲ್ವೆ ಚಿಂತಿಸುತ್ತಿದೆ.

2016ರಲ್ಲಿ ರಾಜಧಾನಿ, ಶತಾಬ್ದಿ, ತುರಂತ್‌ ಸೇರಿದಂತೆ 142 ಐಷಾರಾಮಿ ರೈಲುಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿತ್ತು. ಈ ಯೋಜನೆಯಿಂದ ರೈಲ್ವೆಗೆ ವರ್ಷಕ್ಕೆ ₹200 ಕೋಟಿ ವರಮಾನ ಸಿಗುತ್ತಿತ್ತು.

ಈ ವ್ಯವಸ್ಥೆ ಜಾರಿಗೆ ಬಂದ ನಂತರ, ಅಂದರೆ 2016ರ ಸೆಪ್ಟೆಂಬರ್‌ನಿಂದ ಜುಲೈವರೆಗೆ ಈ ರೈಲುಗಳಲ್ಲಿ 2.40 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರೆ, ಈ ಯೋಜನೆ ಜಾರಿಗೆ ಬರುವ ಮೊದಲು ಅಂದರೆ, 2015ರ ಸೆಪ್ಟೆಂಬರ್‌ನಿಂದ ಜುಲೈ ಅವಧಿಯಲ್ಲಿ 2.47 ಕೋಟಿ ಜನ ಪ್ರಯಾಣಿಸಿದ್ದರು. 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !