ಗುರುವಾರ , ಸೆಪ್ಟೆಂಬರ್ 19, 2019
29 °C

ಪೆಪ್ಸಿ, ಕೋಕಾಕೋಲಾ ಬಾಟಲ್‌ಗೆ ಪರ್ಯಾಯ ವಸ್ತು ಬಳಕೆಗೆ ಸೂಚನೆ

Published:
Updated:
Prajavani

ನವದೆಹಲಿ : ಪೆಪ್ಸಿ ಮತ್ತು ಕೋಕಾಕೋಲಾದಂತಹ  ಬಾಟಲ್‌ ನೀರಿನ ತಯಾರಕರಿಗೆ ಪ್ಲಾಸ್ಟಿಕ್‌ ಹೊರತುಪಡಿಸಿ ಪ್ಯಾಕೇಜ್‌ಗೆ ಪರ್ಯಾಯ ವಸ್ತು ಬಳಸುವಂತೆ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಸೋಮವಾರ ಸೂಚಿಸಿದ್ದಾರೆ.

ಆರೋಗ್ಯ ಮತ್ತು ಪರಿಸರ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ದಿನಗಳೊಳಗೆ ಪ್ಲಾಸ್ಟಿಕ್‌ ಬದಲು ಪರ್ಯಾಯ ವಸ್ತು ಬಳಸಲು ಸಲಹೆಗಳನ್ನು ನೀಡಬೇಕು. ಇದರ ಪರಿಶೀಲನೆಗಾಗಿ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಂತರ್‌ ಸಚಿವಾಲಯದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. 

ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕುಡಿಯುವ ನೀರಿನ ಬಾಟಲ್‌ ತಯಾರಕರ ಸಭೆ ನಡೆಸಿದರು.

Post Comments (+)