ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂ ಸಿ.ಎಂ ಗೋಲೆ

ವಿಧಾನಸಭೆ ಸದಸ್ಯರಲ್ಲ; ಭ್ರಷ್ಟಾಚಾರ ಸಾಬೀತಾಗಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು
Last Updated 27 ಮೇ 2019, 17:21 IST
ಅಕ್ಷರ ಗಾತ್ರ

ಕೋಲ್ಕತ್ತ: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಮುಖ್ಯಸ್ಥ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಸಿಕ್ಕಿಂ ರಾಜ್ಯದ 6ನೇ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.ಪಿ.ಎಸ್.ಗೋಲೆ ಎಂದೇ ಸಿಕ್ಕಿಂನಲ್ಲಿ ಅವರು ಪ್ರಸಿದ್ಧ.

ಗೋಲೆ ಅವರೊಂದಿಗೆ 11 ಶಾಸಕರು ಕೂಡ ಸಚಿವರಾಗಿ ಪ್ರಮಾಣ ಮಾಡಿದ್ದಾರೆ. ಗೋಲೆ ಸದ್ಯ ವಿಧಾನಸಭೆಯ ಸದಸ್ಯರಲ್ಲ. ಭ್ರಷ್ಟಾಚಾರ ಆರೋಪ ಸಾಬೀತಾದ ಕಾರಣ ಎರಡು ವರ್ಷದ ಹಿಂದೆ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು.

ಸಿಕ್ಕಿಂನ ಶಾಸನಸಭೆಯ ಸದಸ್ಯ ಬಲ 32 ಆಗಿದ್ದು, ಗೋಲೆ ನೇತೃತ್ವದ ಎಸ್‌ಕೆಎಂ ಪಕ್ಷ 17 ಸ್ಥಾನ ಗೆದ್ದುಕೊಂಡಿದೆ.

ಶಿಕ್ಷಕ ಹುದ್ದೆಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ: ಡಾರ್ಜಿಲಿಂಗ್‌ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಗೋಲೆ, ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದಕ್ಕೂ ಮೊದಲು ಶಿಕ್ಷಕರಾಗಿದ್ದರು. ಬಳಿಕ, ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ (ಎಸ್‌ಡಿಎಫ್‌) ಪಕ್ಷವನ್ನು ಸೇರಿದ್ದರು.

ಎಸ್‌ಡಿಎಫ್‌ ಅಭ್ಯರ್ಥಿಯಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪವನ್‌ ಚಾಮ್ಲಿಂಗ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ 2009ರವರೆಗೆ ಕಾರ್ಯ ನಿರ್ವಹಿಸಿದ್ದರು.2009ರಲ್ಲಿ ಸಚಿವ ಸ್ಥಾನ ನಿರಾಕರಿಸಿದಾಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಎಸ್‌ಕೆಎಂ ಪಕ್ಷ ಹುಟ್ಟುಹಾಕಿದ್ದರು.

2016ರಲ್ಲಿ ಇವರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಾಬೀತಾದ ಬಳಿಕ ಶಿಕ್ಷೆಗೆ ಗುರಿಯಾಗಿದ್ದು, ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದರು.ಜೈಲು ಸೇರಿದ್ದ ಅವರು 2018ರ ಆಗಸ್ಟ್‌ನಲ್ಲಿ ಬಿಡುಗಡೆಗೊಂಡಿದ್ದರು. ಮೂರು ಬಾರಿ ಮದುವೆಯಾಗಿರುವುದಾಗಿ ಹಿಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅವರು ಹೇಳಿದ್ದರು.

ಈಚೆಗೆ ನಡೆದ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಭ್ರಷ್ಟಾಚಾರ ಆರೋಪ ಸಾಬೀತು ಮತ್ತು ಇದರಿಂದಾಗಿ ಜೈಲಿನಲ್ಲಿದ್ದ ಕಾರಣ ತಮ್ಮ ನಾಮಪತ್ರ ತಿರಸ್ಕೃತಗೊಳ್ಳಬಹುದು ಎಂಬ ಆತಂಕ ಇದಕ್ಕೆ ಕಾರಣವಾಗಿತ್ತು.

ಗೋಲೆ ನೇತೃತ್ವದ ಪಕ್ಷವು ಎನ್‌ಡಿಎಯ ಭಾಗ. ಹಾಗಾಗಿ, ಸರ್ಕಾರಕ್ಕೆ ಕೇಂದ್ರದ ಬೆಂಬಲವೂ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT