7

ಮುಂಗಾರು ಚೇತರಿಕೆ, ಉತ್ತಮ ಮಳೆ ನಿರೀಕ್ಷೆ

Published:
Updated:

ನವದೆಹಲಿ: ದೇಶದ ಶೇ 75ಕ್ಕೂ ಹೆಚ್ಚು ಪ್ರದೇಶದಲ್ಲಿ ಮುಂಗಾರು ವಾಡಿಕೆಗಿಂತ ಕಡಿಮೆಯಾಗಿದೆ. ಆದರೆ ಈ ವಾರ ಮುಂಗಾರು ಚೇತರಿಕೆ ಕಾಣುತ್ತಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೇಶದಲ್ಲಿ 36 ಹವಾಮಾನ ಉಪವಲಯಗಳಿವೆ. ಅವುಗಳಲ್ಲಿ 24ರಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಮತ್ತು ಮುಂಗಾರು ಕೊರತೆಯಾಗಿದೆ ಎಂದು ಇಲಾಖೆ ಹೇಳಿದೆ.

ದಕ್ಷಿಣ ಭಾರತದ ಕೆಲವೆಡೆಯಷ್ಟೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಆರಂಭದ ಎರಡು ವಾರದ ನಂತರ ಅಲ್ಲೂ ಮುಂಗಾರು ಸ್ವಲ್ಪ ದುರ್ಬಲವಾಗಿದೆ.

ಉತ್ತರ ಭಾರತ ಮತ್ತು ಈಶಾನ್ಯ ಭಾರತದತ್ತ ಮುಂಗಾರು ಬೀಸುತ್ತಿದೆ. ಇದೇ 29ರಂದು ಮುಂಗಾರು ದೆಹಲಿಯನ್ನು ಪ್ರವೇಶಿಸುವ ನಿರೀಕ್ಷೆ ಇದೆ.

ಆದರೆ, 27ರಂದೇ ಉತ್ತರ ಭಾರತದ ಹಲವೆಡೆ ಮುಂಗಾರು ಪೂರ್ವ ಮಳೆ ಆಗಲಿದೆ ಎಂದು ಇಲಾಖೆ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !