7
ಹಾಪುರ ವ್ಯಕ್ತಿ ಮೇಲಿನ ಹಲ್ಲೆಯ ಎರಡನೇ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಗೋಹತ್ಯೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಒತ್ತಡ

Published:
Updated:

ಹಾಪುರ, ಉತ್ತರ ಪ್ರದೇಶ (ಪಿಟಿಐ): ಗೋಹತ್ಯೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗುಂಪೊಂದು ಹೊಡೆದು ಸಾಯಿಸಿದ ಮೊದಲ ವಿಡಿಯೊ ಬಹಿರಂಗವಾದ ಬೆನ್ನಲ್ಲೇ, ಎರಡನೇ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗೋಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಳ್ಳುವಂತೆ ಆ ವ್ಯಕ್ತಿಯ ಮೇಲೆ ಗುಂಪೊಂದು ಒತ್ತಡ ಹೇರುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ.

ಸಮಾಯುದ್ದೀನ್‌ (65) ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ  ಗುಂಪು, ತಪ್ಪು ಒಪ್ಪಿಕೊಳ್ಳುವಂತೆ ಮತ್ತು ಗೋಹತ್ಯೆ ಮಾಡಿದ್ದಾರೆ ಎನ್ನಲಾಗಿರುವ ಉಳಿದವರ ಗುರುತನ್ನು ಬಹಿರಂಗ ಪಡಿಸುವಂತೆ ಒತ್ತಡ ಹೇರಿದ್ದಾರೆ. 

ಇದರ ಜೊತೆಗೆ, ಖಾಸಿಂ (45) ಎಂಬುವರ ಮೇಲೂ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸಮಾಯುದ್ದೀನ್‌ ಮೇಲೆ ಹಲ್ಲೆ ನಡೆಸುತ್ತಿರುವುದು ಹಾಗೂ ಅವರು ನೆಲದ ಮೇಲೆ ಬಿದ್ದಿದ್ದ ದೃಶ್ಯಗಳಿರುವ ವಿಡಿಯೊ ಜೂನ್‌ 18ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ, ಖಾಸಿಂರನ್ನು ಗುಂಪು ಅಟ್ಟಾಡಿಸಿ ಹೊಡೆದಿತ್ತು. ಪೊಲೀಸರ ಮುಂದೆಯೇ ಈ ಕೃತ್ಯವನ್ನು ಗುಂಪು ಎಸಗಿತ್ತು. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಪೊಲೀಸರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪೊಲೀಸರು ಕ್ಷಮೆಯಾಚಿಸಿದ್ದರು. 

ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಇದುವರೆಗೆ ಎಫ್‌ಐಆರ್‌ ದಾಖಲಿಸಿಕೊಂಡಿಲ್ಲ ಎಂದು ಸಮಾಯುದ್ದೀನ್‌ ಸಹೋದರ ದೆಹಲಿಯಲ್ಲಿ ಆರೋಪಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !