ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ; ಪೊಲೀಸರ ವಶಕ್ಕೆ ಯುವತಿ ತಂದೆ

7

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ; ಪೊಲೀಸರ ವಶಕ್ಕೆ ಯುವತಿ ತಂದೆ

Published:
Updated:

ಹೈದರಾಬಾದ್: ತೆಲಂಗಾಣದ ಮಿರಯಲಗುಡದಲ್ಲಿ ಶುಕ್ರವಾರ 24 ವರ್ಷದ ಯುವಕ ಪ್ರಣಯ್‌ ಕುಮಾರ್‌ ಹತ್ಯೆ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎನ್ನಲಾಗಿದೆ. ಈ ಸಂಬಂಧ ಯುವತಿ ಅಮೃತಾ ವರ್ಷಿಣಿ ತಂದೆಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. 

ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್‌ ತನ್ನ 5 ತಿಂಗಳ ಗರ್ಭಿಣಿ ಪತ್ನಿ ಅಮೃತಾಳನ್ನು ಸ್ಥಳೀಯ ಆಸ್ಪತ್ರೆಯಿಂದ ತಪಾಸಣೆ ನಡೆಸಿ ಕರೆತರುವ ವೇಳೆ ಪ್ರಣಯ್‌ ಮೇಲೆ ದಾಳಿ ನಡೆದಿದೆ.

ಕೆಳ ಜಾತಿಯವರನ್ನ ಮದುವೆಯಾದುದಕ್ಕೆ ಅಮೃತಾಳ ಮೇಲೆ ಸಂಬಂಧಿ ಶ್ರವಣ್‌ ಹಲವು ಬಾರಿ ಹಲ್ಲೆ ನಡೆಸಿದ್ದು, ಅವರನ್ನೂ ಪೊಲೀಸರು ಬಂಧಿಸಿದ್ದಾರೆ. 

ಅಮೃತಾಳ ತಂದೆ ಮಾರುತಿ ರಾವ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಪ್ರಣಯ್‌ ಹತ್ಯೆಗಾಗಿ  ₹5 ಲಕ್ಷ ಸುಪಾರಿ ಕೊಟ್ಟಿದ್ದರು. ರಾವ್‌ ಅವರಿಗೆ ಜಾತಿ ಮತ್ತು ಪ್ರತಿಷ್ಠೆಯೇ ಮುಖ್ಯವಾಗಿತ್ತು ಎಂದು ನಳಗೊಂಡ ಪೊಲೀಸರು ತಿಳಿಸಿದ್ದಾರೆ. 

ಇದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 6

  Amused
 • 6

  Sad
 • 2

  Frustrated
 • 22

  Angry

Comments:

0 comments

Write the first review for this !