ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪದವಿ ಮಾರಾಟ: ಉನ್ನತ ಮಟ್ಟದ ತನಿಖೆಗೆ ಎಚ್‌ಆರ್‌ಡಿ ನಿರ್ದೇಶನ

Last Updated 30 ಆಗಸ್ಟ್ 2019, 16:49 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೆಲವೆಡೆ ನಡೆಯುತ್ತಿರುವ ನಕಲಿ ಪದವಿಗಳ ಮಾರಾಟ ಕುರಿತು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸುವಂತೆ ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡಿದೆ.

ದೇಶದ ಕೆಲ ಭಾಗಗಳಲ್ಲಿ ಏಜೆಂಟರುಗಳ ಮೂಲಕ ನಕಲಿ ಪದವಿಗಳು ಮಾರಾಟವಾಗುತ್ತಿವೆ. ಮಾನ್ಯತೆ ಪಡೆದ ವಿ.ವಿಗಳಿಂದಲೇ ಪದವಿ ಕೊಡಿಸುವುದಾಗಿ ಏಜೆಂಟರು ವ್ಯಾಪಾರ ನಡೆಸುತ್ತಿದ್ದಾರೆ. ತರಗತಿಗಳಿಗೆ ಹಾಜರಾಗದೆ, ಪರೀಕ್ಷೆಯನ್ನೂ ಬರೆಯದೇ ಇದ್ದರೂ ಪದವಿ ಕೊಡಿಸುವುದಾಗಿ ಏಜೆಂಟರು ದಂಧೆಯಲ್ಲಿ ತೊಡಗಿದ್ದಾರೆಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಎಚ್ಆರ್‌ಡಿ ತನಿಖೆಗೆ ಸೂಚಿಸಿದೆ.

ಸಮಿತಿಯು ವಿಚಾರಣೆಯನ್ನು ಮೂರು ವಾರಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಸಚಿವಾಲಯದ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT