ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್

ಬುಧವಾರ, ಮಾರ್ಚ್ 27, 2019
22 °C

ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್

Published:
Updated:

ನವದೆಹಲಿ: ‘ಪಾಕ್ ವಶದಲ್ಲಿದ್ದ ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಕರೆತರಲು ವಿಶೇಷ ವಿಮಾನ ಕಳಿಸಲು ಭಾರತೀಯ ವಾಯುಪಡೆ ಸಿದ್ಧವಾಗಿತ್ತು. ಆದರೆ ಪಾಕ್ ಸರ್ಕಾರ ಅನುಮತಿ ನಿರಾಕರಿಸಿ, ವಾಘಾ ಗಡಿಯ ಮೂಲಕವೇ ವಾಪಸ್ ಕಳಿಸುವುದಾಗಿ ಘೋಷಿಸಿತು’ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ವಿಂಗ್‌ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ (ಗುರುವಾರ) ಘೋಷಿಸಿದ್ದರು. ಆದರೆ ಹೇಗೆ ಮತ್ತು ಎಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎನ್ನುವ ಬಗ್ಗೆ ಗೊಂದಲಗಳು ಮುಂದುವರಿದಿದ್ದವು.

ಭಾರತಕ್ಕೆ ತರೆತರಲು ಎರಡು ಮಾರ್ಗಗಳಿದ್ದವು. ಒಂದು ವಾಘಾ ಗಡಿಯ ರಸ್ತೆ ಮಾರ್ಗ ಅಥವಾ ಇಸ್ಮಾಮಾಬಾದ್‌ನಿಂದ ವಾಯುಮಾರ್ಗ. ಮಾಧ್ಯಮಗಳು ಕಿಕ್ಕಿರಿದು ತುಂಬಿರುವ ವಾಘಾ ಗಡಿಯನ್ನು ಅಭಿನಂದನ್ ಹಾದು ಬರುವುದು ಭಾರತಕ್ಕೆ ಇಷ್ಟವಿರಲಿಲ್ಲ. ಸಂಜೆ ನಡೆಯುವ ಫ್ಲಾಗ್ ಲೋಯರಿಂಗ್ ಸಮಾರಂಭಕ್ಕೆ ಬಹುಸಂಖ್ಯೆಯಲ್ಲಿ ಜನ ಸೇರುವುದರಿಂದ ಆ ಅವಧಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯುವುದು ಭಾರತಕ್ಕೆ ಇಷ್ಟವಿರಲಿಲ್ಲ ಎಂದು ಎನ್‌ಡಿಟಿವಿ ಹೇಳಿದೆ.

ಪಾಕ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅಭಿನಂದನ್ ಅವರನ್ನು ವಾಘಾ ಗಡಿಯ ಮೂಲಕವೇ ಹಸ್ತಾಂತರಿಸಲಾಗುವುದು ಎಂದು ಪಾಕ್ ಸರ್ಕಾರ ಹೇಳಿತ್ತು. ಇಸ್ಲಾಮಾಬಾದ್‌ನಿಂದ ದೆಹಲಿಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಕರೆತಂದು ಮಾಧ್ಯಮ ಸಂವಾದ ಮತ್ತು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಬೇಕು ಎನ್ನುವುದು ಭಾರತದ ಇಚ್ಛೆಯಾಗಿತ್ತು. ಅಭಿನಂದನ್ ಕರೆತರಲು ಹೊರಟಿರುವ ಅಧಿಕಾರಿಗಳ ಪಟ್ಟಿಯನ್ನೂ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿತ್ತು. ತೆರೆದ ಬಯಲಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಅಭಿನಂದನ್‌ರನ್ನು ಪ್ರಶ್ನಿಸುವುದು, ವಿಚಾರಣೆ ಮಾಡುವುದು ಭಾರತ ಸರ್ಕಾರಕ್ಕೆ ಇಷ್ಟವಿರಲಿಲ್ಲ ಎಂದು ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 121

  Happy
 • 29

  Amused
 • 25

  Sad
 • 24

  Frustrated
 • 11

  Angry

Comments:

0 comments

Write the first review for this !