ಸೋಮವಾರ, ಮಾರ್ಚ್ 1, 2021
23 °C

ಸುಮ್ಮನಿರಿ ಟ್ರಂಪ್: ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾವಕ್ಕೆ ಭಾರತ ಸ್ಪಷ್ಟ ನಕಾರ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತವು ಮಾತುಕತೆ ನಡೆಸುವುದಿದ್ದರೆ ಅದು ಪಾಕಿಸ್ತಾನದ ಜೊತೆಗೆ ಮಾತ್ರ. ಮಧ್ಯಸ್ಥಿಕೆಗೆ ಮತ್ತೊಬ್ಬರ ಅಗತ್ಯವಿಲ್ಲ. ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸಂಬಂಧಿಸಿದ ದ್ವಿಪಕ್ಷೀಯ ವಿಚಾರ’ ಎಂದು ಭಾರತ ಸರ್ಕಾರ ಅಮೆರಿಕಕ್ಕೆ ಮತ್ತೊಮ್ಮೆ ಸ್ಪಷ್ಪಪಡಿಸಿದೆ.

ಇದನ್ನೂ ಓದಿ: ಕಾಶ್ಮೀರ ವಿವಾದ: ಮಧ್ಯಸ್ಥಿಕೆಗೆ ಟ್ರಂಪ್‌ ಒಲವು

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಕಾಶ್ಮೀರ ವಿವಾದ ಪರಿಹಾರಕ್ಕಾಗಿ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಶುಕ್ರವಾರ ಮುಂಜಾನೆ ಮತ್ತೊಮ್ಮೆ ಹೇಳಿದ್ದರು. ಟ್ರಂಪ್ ಹೇಳಿಕೆ ಬಹಿರಂಗಗೊಂಡ ಕೆಲವೇ ಗಂಟೆಗಳಲ್ಲಿ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಆಸಿಯಾನ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ತೆರಳಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಂಕರ್ ಭಾರತ ಸರ್ಕಾರದ ನಿಲುವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಭೇಟಿಯಾಗಿ ‘ಕಾಶ್ಮೀರದ ಬಗ್ಗೆ ಭಾರತವು ಮಾತುಕತೆ ನಡೆಸುವುದಿದ್ದರೆ ಅದು ಪಾಕಿಸ್ತಾನದ ಜೊತೆಗೆ ಮಾತ್ರ’ ಎನ್ನುವ ನಮ್ಮ (ಭಾರತದ) ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಟ್ರಂಪ್‌ ಹೇಳಿಕೆ ಅಲ್ಲಗಳೆದ ಭಾರತ

‘ಕಾಶ್ಮೀರ ವಿವಾದ ಕುರಿತ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಇದಾದ ಬೆನ್ನಿಗೆ ಭಾರತ ಟ್ರಂಪ್ ಅವರ ಪ್ರಸ್ತಾವವನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿತ್ತು. ಶ್ವೇತಭವನದ ಪತ್ರಕರ್ತರೊಬ್ಬರಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಮತ್ತೊಮ್ಮೆ ಪ್ರಸ್ತಾಪವಾದಾಗ, ‘ಯಾರಾದರೊಬ್ಬರು ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಬಯಸಿದರೆ ನಾನು ಖಂಡಿತಾ ಸಿದ್ಧನಿದ್ದೇನೆ. ಈ ಬಗ್ಗೆ ಪಾಕಿಸ್ತಾನದ ಜೊತೆಗೆ ಮುಕ್ತವಾಗಿ ಮಾತನಾಡಿದ್ದೇನೆ. ಭಾರತದ ಜೊತೆಗೂ ಮಾತನಾಡುತ್ತೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದರು.

‘ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮೋದಿ ಕೋರಿದ್ದಾರೆ’ ಎಂದು ಟ್ರಂಪ್ ಜೂನ್ 22ರಂದು ಹೇಳಿದ್ದರು. ಈ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಳ್ಳಿ ಹಾಕಿತ್ತು. ನಂತರ ಪ್ರತಿಕ್ರಿಯಿಸಿದ್ದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಖಾತೆ, ‘ಕಾಶ್ಮೀರ ಕುರಿತ ಅಮೆರಿಕ ಸರ್ಕಾರದ ನಿಲುವು ಟ್ರಂಪ್ ಅವರ ವೈಯಕ್ತಿಕ ನಿಲುವಿಗಿಂತ ಭಿನ್ನವಾಗಿದೆ. ಕಾಶ್ಮೀರ ವಿವಾದವನ್ನು ಬಗ್ಗೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳಬೇಕು’ ಎಂದು ಹೇಳಿತ್ತು. 

ಇನ್ನಷ್ಟು... 

ಕಾಶ್ಮೀರದಲ್ಲಿ ಕುದಿಮೌನ: ಸೇನಾ ಮುಖ್ಯಸ್ಥರ ಭೇಟಿ, ಅಮರನಾಥ ಯಾತ್ರೆ ಸ್ಥಗಿತ

ಮಾತುಕತೆ ಮೂಲಕ ಕಾಶ್ಮೀರ ವಿವಾದ ಪರಿಹರಿಸಿ: ಚೀನಾ 

ಟ್ರಂಪ್‌ ಹೇಳಿಕೆ; ಪಾಕ್‌ ನಿರೀಕ್ಷೆಗೂ ಮೀರಿದ್ದು– ಖುರೇಷಿ ಅಭಿಮತ 

ಟ್ರಂಪ್ ಜತೆಗಿನ ಮಾತುಕತೆಯಲ್ಲಿ ಏನಾಯಿತು ಎಂಬುದನ್ನು ಮೋದಿ ಹೇಳಲಿ: ರಾಹುಲ್ ಗಾಂಧಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.