ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೊದಲ ಪೊಲೀಸ್ ವಸ್ತು ಸಂಗ್ರಹಾಲಯ 21ಕ್ಕೆ ಅನಾವರಣ

Last Updated 14 ಅಕ್ಟೋಬರ್ 2018, 19:41 IST
ಅಕ್ಷರ ಗಾತ್ರ

ನವದೆಹಲಿ: ಪೊಲೀಸ್ ಸ್ಮರಣಾರ್ಥ ದಿನವಾದ ಅಕ್ಟೋಬರ್ 21 ರಂದು ದೆಹಲಿಯ ಚಾಣಕ್ಯಪುರಿಯಲ್ಲಿ ದೇಶದ ಮೊದಲ ರಾಷ್ಟ್ರೀಯ ಪೋಲಿಸ್ ವಸ್ತುಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ವಸ್ತುಸಂಗ್ರಹಾಲಯದಲ್ಲಿ ಪೊಲೀಸ್‌ ಇಲಾಖೆಯ ಇತಿಹಾಸ, ಸಮವಸ್ತ್ರ, ಕಲಾಕೃತಿಗಳು, ಐತಿಹಾಸಿಕ ಮೌಲ್ಯವಿರುವ ದಾಖಲಾತಿ, ವಸ್ತುಗಳು, ವಿಶೇಷ ಆಯುಧ ಪ್ರದರ್ಶನಕ್ಕೆ ಇರಲಿವೆ.

ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಇಂಟೆಲಿಜೆನ್ಸ್ ಬ್ಯೂರೋ (ಐ.ಬಿ) ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸೇರಿ ಈ ವಸ್ತು ಸಂಗ್ರಹಾಲಯ ನಿರ್ಮಿಸಿವೆ.

ಸೇವೆಯಲ್ಲಿರುವಾಗಲೇ ಮೃತಪಟ್ಟಸಿಬ್ಬಂದಿ ಹೆಸರು ಪ್ರದರ್ಶಿಸುವ ‘ಶೌರ್ಯದ ಗೋಡೆ’ಯನ್ನು ಇದೇ ಸಂದರ್ಭದಲ್ಲಿ ಮೋದಿ ಉದ್ಘಾಟಿಸಲಿದ್ದಾರೆ.

ಮಹಿಳಾ ಬೆಟಾಲಿಯನ್ ಬಗ್ಗೆ ವಿಶೇಷ ವಿಭಾಗವೂ ಈ ಸಂಗ್ರಹಾಲಯದಲ್ಲಿ ಇರಲಿದೆ. ಸಾಧನೆ ವರದಿಯ ಪತ್ರಿಕೆ ಸಂಗ್ರಹ, ಹಳೆಯ ವೈರ್‌ ಲೆಸ್‌ ಸಾಧನ, ಪದಕಗಳನ್ನು ಪ್ರದರ್ಶನಕ್ಕಿಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT