ಅಮೆರಿಕ ಒತ್ತಡಕ್ಕೆ ಮಣಿಯದ ಭಾರತ: ಇರಾನ್‌ನಿಂದ ಕಚ್ಚಾತೈಲ ಆಮದು ಅಬಾಧಿತ

7
ರೂಪಾಯಿಯಲ್ಲಿ ವಹಿವಾಟು

ಅಮೆರಿಕ ಒತ್ತಡಕ್ಕೆ ಮಣಿಯದ ಭಾರತ: ಇರಾನ್‌ನಿಂದ ಕಚ್ಚಾತೈಲ ಆಮದು ಅಬಾಧಿತ

Published:
Updated:

ನವದೆಹಲಿ: ಅಮೆರಿಕದ ದಿಗ್ಬಂಧನದ ಹೊರತಾಗಿಯೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ಶುಕ್ರವಾರ ಸ್ಪಷ್ಟಪಡಿಸಿದೆ.

ಇರಾನ್‌ನಿಂದ ಕಚ್ಚಾತೈಲ ಆಮದು ಕಡಿತಗೊಳಿಸುವಂತೆ ಅಮೆರಿಕ ಕಳೆದ ತಿಂಗಳು ಭಾರತದ ಮೇಲೆ ಒತ್ತಡ ಹೇರಿತ್ತು.

ಆದರೆ, ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮತ್ತು ಮಂಗಳೂರು ರಿಫೈನರಿ ಆಂಡ್‌ ಪೆಟ್ರೊಕೆಮಿಕಲ್ಸ್‌ (ಎಂಆರ್‌ಪಿಎಲ್‌) ತೈಲ ಕಂಪನಿಗಳು 12.5 ಲಕ್ಷ ಟನ್‌ ಕಚ್ಚಾತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ.

ಇರಾನ್‌ ತೈಲ ವಲಯದ ವಿರುದ್ಧ ಅಮೆರಿಕದ ದಿಗ್ಬಂಧನ ನವೆಂಬರ್‌ 4ರಿಂದ ಜಾರಿಯಾಗಲಿದೆ. ಅದೇ ತಿಂಗಳಲ್ಲಿಯೇ ಕಚ್ಚಾತೈಲ ಭಾರತಕ್ಕೆ ಆಮದಾಗಲಿದೆ. ಅಂತರರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ವಹಿವಾಟು ಡಾಲರ್‌ನಲ್ಲಿ ನಡೆಯುತ್ತಿದೆ. ಆರ್ಥಿಕ ದಿಗ್ಬಂಧನದ ನಂತರ ಡಾಲರ್‌ ಬದಲು ರೂಪಾಯಿಯಲ್ಲಿಯೇ ವಹಿವಾಟು ನಡೆಸಲು ಭಾರತ ಮುಂದಾಗಿದೆ ಎಂದು ಉದ್ಯಮ ವಲಯದ ಮೂಲಗಳು ದೃಢಪಡಿಸಿವೆ.

ಭಾರತದಿಂದ ಆಮದು ಮಾಡಿಕೊಳ್ಳುವ ಔಷಧ, ಪಡಿತರ ಮತ್ತು ಇತರ ವಸ್ತುಗಳಿಗೆ ರೂಪಾಯಿಯನ್ನು ಇರಾನ್‌ ಮರು ಪಾವತಿಸಲಿದೆ. ದಿಗ್ಬಂಧನದ ನಂತರದ ವಹಿವಾಟುಗಳಿಗೆ ಡಾಲರ್‌ ಬದಲು ರೂಪಾಯಿ ಕರೆನ್ಸಿ ಚಲಾವಣೆಗೆ ತರಲು ಮುಂದಿನ ಕೆಲವು ವಾರಗಳಲ್ಲಿಯೇ ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !