ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನೌಕಾಪಡೆಗೆ ‘ಬರಾಕ್’ ಬಲ

ಇಸ್ರೇಲ್‌ ಕ್ಷಿಪಣಿ ವ್ಯವಸ್ಥೆ
Last Updated 24 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಜರುಸಲೇಂ: ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ ‘ಬರಾಕ್–8’ ಅನ್ನು ಭಾರತದ ನೌಕಾಪಡೆಗೆ ಸದ್ಯದಲ್ಲೇ ಪೂರೈಸುವುದಾಗಿ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಬುಧವಾರ ಪ್ರಕಟಿಸಿದೆ.

ಬರಾಕ್–8 ಎಲ್‌ಆರ್–ಎಸ್‌ಎಎಂ (ಲಾಂಗ್ ರೇಂಜ್ ಸರ್ಫೇಸ್ ಟು ಏರ್‌ ಮಿಸೈಲ್) ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ನೌಕಾಪಡೆಯ 7 ಹಡಗುಗಳಲ್ಲಿ ಅಳವಡಿಸಲಾಗುತ್ತದೆ. ಈ ಕ್ಷಿಪಣಿ ವ್ಯವಸ್ಥೆಯ ಮಾರಾಟವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಪ್ರತೀಕ ವಾಗಿದೆ ಎಂದು ಐಎಐ ಹೇಳಿದೆ.

ಕ್ಷಿಪಣಿ ವ್ಯವಸ್ಥೆ ಮಹತ್ವ

* ಇಸ್ರೇಲ್‌ನ ಐಎಐ, ಭಾರತದ ಡಿಆರ್‌ಡಿಒ ಮತ್ತು ಇತರೆ ಕಂಪನಿಗಳಿಂದ ಜಂಟಿ ಅಭಿವೃದ್ಧಿ

* ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಸ್ರಾನಿಕ್ಸ್, ಒಪ್ಪಂದವನ್ನು ಕಾರ್ಯರೂಪಕ್ಕೆ ತರಲಿದೆ

* ವಾಯು, ಭೂಮೇಲ್ಮೈ ಹಾಗೂ ಸಮುದ್ರದ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಇದಕ್ಕಿದೆ

*ಅತ್ಯಾಧುನಿಕ ಡಿಜಿಟಲ್ ರೇಡಾರ್, ಲಾಂಚರ್‌ಗಳು, ಕಮಾಂಡ್ ಮತ್ತು ಕಂಟ್ರೋಲಿಂಗ್ ವ್ಯವಸ್ಥೆ,
ಡಾಟಾ ಲಿಂಕ್ ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕ ವ್ಯವಸ್ಥೆ ಹೊಂದಿದೆ

* ಯಾವುದೇ ವಾತಾವರಣದಲ್ಲಿ ಹಗಲು, ರಾತ್ರಿ ಎನ್ನದೇ ಏಕಕಾಲದಲ್ಲಿ ವಿವಿಧ ಕಡೆ ನಿಗಾ ವಹಿಸುವ ಸಾಮರ್ಥ್ಯವಿದೆ

ಅಂಕಿಅಂಶ

* ₹6 ಸಾವಿರ ಕೋಟಿ - ಇಸ್ರೇಲ್‌ನಿಂದ 7 ‘ಬರಾಕ್ ಕ್ಷಿಪಣಿ ವ್ಯವಸ್ಥೆ’ ಖರೀದಿ ಮೊತ್ತ

* ₹4.5 ಸಾವಿರ ಕೋಟಿ - ಮುಂದಿನ ಕೆಲ ತಿಂಗಳಲ್ಲಿ 4 ಬರಾಕ್ ಕ್ಷಿಪಣಿಗಳ ಖರೀದಿ ಮೊತ್ತ

* ₹15 ಸಾವಿರ ಕೋಟಿ –ಕಳೆದ ವರ್ಷ ಭಾರತದಿಂದ ಇಸ್ರೇಲ್ ಪಡೆದಿರುವ ರಕ್ಷಣಾ ಸಾಮಗ್ರಿ ಪೂರೈಕೆ ಗುತ್ತಿಗೆಯ ಒಟ್ಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT