ಜೈರಾಮ್‌ ರಮೇಶ್‌ಗೆ ಸಮನ್ಸ್‌

ಶನಿವಾರ, ಏಪ್ರಿಲ್ 20, 2019
31 °C

ಜೈರಾಮ್‌ ರಮೇಶ್‌ಗೆ ಸಮನ್ಸ್‌

Published:
Updated:

ನವದೆಹಲಿ: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್‌ ರಮೇಶ್‌, ‘ಕಾರವನ್‌’ ನಿಯತ ಕಾಲಿಕೆ ಸಂಪಾದಕ ಮತ್ತು ವರದಿಗಾರರಿಗೆ ಏಪ್ರಿಲ್‌ 25ರಂದು ಹಾಜರಾಗುವಂತೆ ದೆಹಲಿ ನ್ಯಾಯಾಲಯ ಸಮನ್ಸ್‌ ನೀಡಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್‌ ದೋಭಾಲ್‌ ಪುತ್ರ ವಿವೇಕ್‌ ಅವರು ನಿಯತಕಾಲಿಕೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಬ್ರಿಟನ್‌ನ ಕೇಮನ್‌ ದ್ವೀಪದಲ್ಲಿ ವಿವೇಕ್‌ ಹಣ ಹೂಡಿಕೆ ಮಾಡಿದ್ದಾರೆ ಎಂದು ‘ಕಾರವನ್‌’ ನಿಯತಕಾಲಿಕೆ ಲೇಖನ ಪ್ರಕಟಿಸಲಾಗಿತ್ತು. ಬಳಿಕ, ಜೈರಾಮ್‌ ರಮೇಶ್‌ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದ್ದರು.

ಈ ಬಗ್ಗೆ ಜನವರಿ 30ರಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ವಿವೇಕ್‌,  ಎಲ್ಲ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರ ಎಂದು ಪ್ರತಿಪಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !