ಮಂಗಳವಾರ, ನವೆಂಬರ್ 19, 2019
28 °C

ಕಾಶ್ಮೀರ: ಸಂಸ್ಥೆಗಳ ಹೆಸರು ಬದಲಿಸಲು ಕೇಂದ್ರ ಚಿಂತನೆ

Published:
Updated:

ಶ್ರೀನಗರ: ಅ. 31ರಂದು ನೂತನ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿರುವ ಜಮ್ಮು–ಕಾಶ್ಮೀರದಲ್ಲಿರುವ ಪ್ರಮುಖ ಕಟ್ಟಡ, ಆಸ್ಪತ್ರೆ, ವಿಮಾನ ನಿಲ್ದಾಣ ಹಾಗೂ ಕ್ರೀಡಾಂಗಣಗಳ ಹೆಸರುಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ನ್ಯಾಷನಲ್‌ ಕಾನ್ಪರೆನ್ಸ್‌ ಸಂಸ್ಥಾಪಕ ಶೇಖ್‌ ಮುಹಮದ್‌ ಅಬ್ದುಲ್ಲಾ ಅವರನ್ನು ಶೇರ್–ಎ–ಕಾಶ್ಮೀರ್‌ ಎಂದು ಕರೆಯಲಾಗುತ್ತದೆ. ಪ್ರಮುಖ ಸಂಸ್ಥೆ, ಸ್ಥಳಗಳಿಗೆ ಅವರ ಹೆಸರಿಡಲಾಗಿದೆ. ಇವುಗಳಿಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹಾಗೂ ಬಿಜೆಪಿ ಸಂಸ್ಥಾಪಕರ ಹೆಸರಿಡುವ ಬಗ್ಗೆ ಚರ್ಚೆ ನಡೆದಿದ್ದು, ನ. 15ರ ಒಳಗಾಗಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)