ಶುಕ್ರವಾರ, ಜನವರಿ 24, 2020
27 °C
ಒಂದೇ ಕಾರಿನಲ್ಲಿ ಪ್ರಯಾಣ l ಎರಡು ರೈಫಲ್‌ ಸೇರಿದಂತೆ ಶಸ್ತ್ರಾಸ್ತ್ರಗಳು ವಶಕ್ಕೆ

ಶ್ರೀನಗರ: ಉಗ್ರರ ಜತೆಗಿದ್ದ ಡಿವೈಎಸ್‌ಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ : ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಡಿವೈಎಸ್‌ಪಿ ಮತ್ತು ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ಹೇಳಿದ್ದಾರೆ. 

ಡಿವೈಎಸ್‌ಪಿ ದವಿಂದರ್‌ ಸಿಂಗ್ ಶ್ರೀನಗರ ವಿಮಾನ ನಿಲ್ದಾಣಕ್ಕೆ ಅಪಹರಣ ತಡೆ ತಂಡದ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಉಗ್ರರಾದ ನವೀದ್‌ ಬಾಬು ಮತ್ತು ಅಲ್ತಾಫ್‌ ಅವರ ಜತೆ ದವಿಂದ್‌ ಸಿಂಗ್‌ ಶನಿವಾರ ಶೋಪಿಯಾನ್‌ನಿಂದ ಪಯಣಿಸುತ್ತಿದ್ದರು. ಕಾರಿನಲ್ಲಿದ್ದ ಎರಡು ಎ.ಕೆ. ರೈಫಲ್‌ಗಳು, ಸಿಂಗ್‌ ಮನೆಯಲ್ಲಿ ಶೋಧದ ವೇಳೆ ಸಿಕ್ಕ ಎರಡು ಪಿಸ್ತೂಲುಗಳು ಮತ್ತು ಒಂದು ಎ.ಕೆ. ರೈಫಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್‌ಪಿಯನ್ನು ಸಹ ಉಗ್ರ ಎಂಬುದಾಗಿ ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನವೀದ್‌ ಈ ಮೊದಲು ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದು, 2017ರಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಭಯೋತ್ಪಾದಕ ಸಂಘಟನೆ ಸೇರಿದ್ದ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು