ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: 5 ಹಂತಗಳಲ್ಲಿ ಮತದಾನ

ಜಾರ್ಖಂಡ್‌ ವಿಧಾನಸಭೆಗೆ ನ. 30ರಿಂದ ಚುನಾವಣೆ * ಡಿ. 23ಕ್ಕೆ ಮತ ಎಣಿಕೆ
Last Updated 1 ನವೆಂಬರ್ 2019, 19:41 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ ವಿಧಾನಸಭೆಗೆ ನ.30ರಿಂದ ಡಿ.20ರವರೆಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮತ ಎಣಿಕೆ ಡಿ.23ರಂದು ಜರುಗಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ, 81 ಕ್ಷೇತ್ರಗಳನ್ನು ಹೊಂದಿರುವ ಜಾರ್ಖಂಡ್‌ ವಿಧಾನಸಭೆಗೆ ನ.30, ಡಿ. 7, 12, 16 ಮತ್ತು 20ರಂದು ಮತದಾನ ನಡೆಯಲಿದೆ ಎಂದರು. ಮೊದಲ ಹಂತದಲ್ಲಿ 13 ಕ್ಷೇತ್ರಗಳ ಮತದಾನ ನಡೆಯಲಿದೆ. ಎರಡು, ಮೂರು, ನಾಲ್ಕು, ಐದನೇ ಹಂತಗಳಲ್ಲಿ ಕ್ರಮವಾಗಿ 20, 17, 15, 16 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ.

ನಕ್ಸಲ್‌ ಪೀಡಿತ ರಾಜ್ಯದಲ್ಲಿ 2014ರಲ್ಲಿಯೂ ಐದು ಹಂತಗಳಲ್ಲಿ ಮತದಾನವಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲಿ ಬುಡಕಟ್ಟು ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT