ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯುನಲ್ಲಿ ₹45 ಕೋಟಿಗಿಂತಲೂ ಹೆಚ್ಚು ಹಣದ ಕೊರತೆ ಇದೆ ಎಂದ ಆಡಳಿತ ಮಂಡಳಿ 

Last Updated 22 ನವೆಂಬರ್ 2019, 9:47 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್, ನೀರಿನ ಬಿಲ್ ಮತ್ತು ಗುತ್ತಿಗೆ ಸಿಬ್ಬಂದಿಗಳ ವೇತನ ಇವೆಲ್ಲವೂ ಸೇರಿ ₹45 ಕೋಟಿಗಿಂತಲೂ ಹೆಚ್ಚು ಹಣದ ಕೊರತೆ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)ನಲ್ಲಿದೆ ಎಂದು ವಿಶ್ವವಿದ್ಯಾಲಯದಆಡಳಿತ ಮಂಡಳಿ ಹಾಸ್ಟೆಲ್ ಶುಲ್ಕ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

₹45 ಕೋಟಿಗಿಂತಲೂ ಹೆಚ್ಚು ಹಣದ ಕೊರತೆ ಇಲ್ಲಿದೆ. ವಿದ್ಯುತ್ ಮತ್ತು ನೀರಿನ ಬಿಲ್ ಜಾಸ್ತಿ ಬರುತ್ತಿದೆ. ಅದರ ಜತೆಗೆ ಗುತ್ತಿಗೆ ಸಿಬ್ಬಂದಿಗಳ ಸಂಬಳವೂ. ಹಾಸ್ಟೆಲ್‌ನಲ್ಲಿರುವ ಗುತ್ತಿಗೆ ಸಿಬ್ಬಂದಿಗಳಿಗೆ ಸಂಬಳ ನೀಡಲು ಕಾಲೇಜು ಬಜೆಟ್‌ನಿಂದ ಹಣ ವಿನಿಯೋಗಿಸಲು ಯುಜಿಸಿ ಅನುಮತಿ ನೀಡುವುದಿಲ್ಲ. ಹಾಸ್ಟೆಲ್‌ಗಳಲ್ಲಿ ಈ ರೀತಿಯ ಸಿಬ್ಬಂದಿಗಳ ಸಂಖ್ಯೆ 450ಕ್ಕಿಂತಲೂ ಹೆಚ್ಚು ಇದೆ. ವೇತನ ರಹಿತಖರ್ಚುಗಳಲ್ಲಿ ಹಣದ ಕೊರತೆ ಬಂದರೆ ಯುನಿವರ್ಸಿಟಿಯಲ್ಲಿಯೇ ಆ ಹಣ ಸಂಗ್ರಹಿಸಬೇಕು ಎಂದು ಯುಜಿಸಿ ಹೇಳಿದೆ.ಹಾಗಾಗಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡದೆ ಬೇರೆ ದಾರಿ ಇಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಜೆಎನ್‌ಯುಟಿಎಕಾರ್ಯಕಾರಿ ಸಮಿತಿಯ 13 ಸದಸ್ಯರು ಶಾಸ್ತ್ರಿಭವನದಲ್ಲಿ ಮಾನವ ಸಂಪನ್ಮೂಲ ಸಚಿವಾಲಯದ ಪ್ರತಿನಿಧಿಗಳನ್ನು (ಎಂಎಚ್‌ಆರ್‌ಡಿ) ಭೇಟಿ ಮಾಡಿ, ಹಾಸ್ಟೆಲ್ ಶುಲ್ಕ ಏರಿಕೆ ಮಾಡದೆ ಬೇರೇನೂ ಉಪಾಯವಿಲ್ಲ ಎಂದು ಉಲ್ಲೇಖಿಸಿರುವ ನಿವೇದನೆಯನ್ನು ಸಲ್ಲಿಸಿದೆ. ಸದ್ಯ ಉಪಕುಲಪತಿಯವರು ಕಚೇರಿಯಲ್ಲಿ ಇಲ್ಲದೇ ಇರುವ ಕಾರಣ ವಿಶ್ವವಿದ್ಯಾಲಯದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಅದೇ ವೇಳೆ ಹಣಕಾಸಿನ ಅವ್ಯವಸ್ಥೆ ಮತ್ತು ಅನಗತ್ಯ ಖರ್ಚುಗಳು ಇಲ್ಲಿವೆ ಎಂದು ಶಿಕ್ಷಕರ ಸಮಿತಿ ದೂರಿದೆ.

ಜೆಎನ್‌ಯುನಲ್ಲಿ 17 ಹಾಸ್ಟೆಲ್‌ಗಳಿದ್ದು ದಶಕಗಳಿಂದ ಇವು ಸುವ್ಯವಸ್ಥಿತವಾಗಿ ನಡೆದು ಬರುತ್ತಿವೆ. ದಿಢೀರನೆ ಆರ್ಥಿಕ ಹಿಂಜರಿತ ಕಂಡು ಬಂದಿದ್ದರಿಂದ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಗೆ ಮಾಡಬೇಕಾದ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಜೆಎನ್‌ಯುಟಿ ತಮ್ಮ ನಿವೇದನೆಯಲ್ಲಿ ಉಲ್ಲೇಖಿಸಿದೆ. ಎಂಎಚ್‌ಆರ್‌ಡಿ ಸಮಿತಿ ಶುಕ್ರವಾರ ಜೆಎನ್‌ಯುಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT