ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರೊಂಗ ಅಬೊ ಪತ್ನಿಯ ಅವಿರೋಧ ಆಯ್ಕೆಗೆ ನಿರ್ಧಾರ

Last Updated 5 ಜೂನ್ 2019, 20:00 IST
ಅಕ್ಷರ ಗಾತ್ರ

ಇಟಾನಗರ (ಪಿಟಿಐ):ಶಂಕಿತ ‘ಎನ್‌ಎಸ್‌ಸಿಎನ್‌(ಐಎಂ)’ ಸಂಘಟನೆ ಉಗ್ರರ ದಾಳಿಗೆ ಬಲಿಯಾದ ನ್ಯಾಷನಲ್ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಶಾಸಕ ತಿರೊಂಗ ಅಬೊ ಅವರ ಪತ್ನಿ ಚಕತ್‌ ಅಬೊ ಅವರನ್ನು ಖೋನ್ಸಾ ಪಶ್ಚಿಮ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ ಮಾಡಲು ಅರುಣಾಚಲ ಪ್ರದೇಶ ವಿಧಾನ ಸಭೆಯ ಎಲ್ಲ ಶಾಸಕರು
ಪಕ್ಷ ಭೇದವಿಲ್ಲದೇ ನಿರ್ಧಾರ ಮಾಡಿದ್ದಾರೆ.

ಮೇ 21ರಂದು ಶಂಕಿತ ‘ಎನ್‌ಎಸ್‌ಸಿಎನ್‌’ ಉಗ್ರರು, ಶಾಸಕ ಹಾಗೂ ವಿಧಾನ ಸಭಾ ಚುನಾವಣಾ ಅಭ್ಯರ್ಥಿಯೂ ಆಗಿದ್ದ ತಿರೊಂಗ ಅಬೊ ಮತ್ತು ಅವರ ಮಗ ಸೇರಿದಂತೆ ಹತ್ತು ಮಂದಿಯನ್ನು ತಿರಪ್‌ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದರು.

ತಿರೊಂಗ ಅಬೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯಲ್ಲಿ ಶಾಸಕರು ಈ ಕುರಿತು ಮುಂದಿರಿಸಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪೆಮಾ ಖಂಡು, ‘ಸರ್ವ ಪಕ್ಷಗಳ ಸಭೆ ಕರೆದು, ಚಕತ್‌ ಅಬೊ ಅವರನ್ನು ಮತ್ತೆ ಉಪಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಮಂಡಿಸಲಾಗುವುದು.ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಅವಕಾಶ ಕಲ್ಪಿಸಿ ಯುವ ನಾಯಕ ತಿರೊಂಗ್‌ ಅಬೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

2014ರಲ್ಲಿ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಮೂಲಕ ಶಾಸಕರಾಗಿ ಆಯ್ಕೆಯಾದ ತಿರೊಂಗ ಬಳಿಕ ಕಾಂಗ್ರೆಸ್‌ ಸೇರಿ, ನಬಮ್‌ ಟುಕಿ ಮುಖ್ಯಮಂತ್ರಿ ಆಗಿದ್ದಾಗ ಸಂಪುಟ ಸಚಿವರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ತಿರೊಂಗ ಅವರ ಹತ್ಯೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಖಂಡು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT