ಅಮಿತಾಬ್ ಬಚ್ಚನ್‌ಗೆ ನೋಟಿಸ್ ನೀಡಿದ ದೆಹಲಿ ಬಾರ್ ಕೌನ್ಸಿಲ್

7

ಅಮಿತಾಬ್ ಬಚ್ಚನ್‌ಗೆ ನೋಟಿಸ್ ನೀಡಿದ ದೆಹಲಿ ಬಾರ್ ಕೌನ್ಸಿಲ್

Published:
Updated:

ನವದೆಹಲಿ: ದೆಹಲಿ ವಕೀಲರ ಸಂಘವು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಎವರೆಸ್ಟ್ ಮಸಾಲ, ಯುಟ್ಯೂಬ್ ಮತ್ತು ಮಾಧ್ಯಮ ಸಂಸ್ಥೆಯೊಂದಕ್ಕೂ ನೋಟಿಸ್ ನೀಡಲಾಗಿದೆ. ವಕೀಲರ ಉಡುಗೆಗಳನ್ನು ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಪೂರ್ವಾಪರ ವಿವೇಚನೆಯಿಲ್ಲದೆ ಜಾಹೀರಾತು ಪ್ರಸಾರ ಮಾಡಿದ ಸಂಸ್ಥೆಗಳೂ ತಪ್ಪು ಮಾಡಿದೆ ಎಂದು ವಕೀಲರ ಸಂಘ ದೂರಿದೆ.

‘ವಕೀಲರ ಉಡುಗೆಗಳನ್ನು ಜಾಹೀರಾತಿಗೆ ಬಳಸುವ ಮೊದಲು ನೀವು ಅಗತ್ಯ ಮುನ್ನೆಚ್ಚರಿಕೆ ವಹಿಸಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆ ಜಾಹೀರಾತು ನಿರ್ಮಿಸಿ, ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂಥ ಎಲ್ಲ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆಲ್ಲ ವಕೀಲರ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅಗೌರವ ತೋರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಜಾಹೀರಾತಿನ ಪಾತ್ರಧಾರಿ ಮತ್ತು ನಿರ್ಮಾಣ ಸಂಸ್ಥೆಯನ್ನು ಒತ್ತಾಯಿಸಲಾಗಿದೆ. 10 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ.

‘ಎವೆರೆಸ್ಟ್‌ ಮಸಾಲಾ’ಗಾಗಿ ನಿರ್ಮಿಸಿದ ಈ ವಿವಾದಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಡ್ರೆಸ್ಸಿಂಗ್‌ ರೂಂನಲ್ಲಿ ವಕೀಲರ ಪಾತ್ರ ಧರಿಸಿ ಕುಳಿತಿರುತ್ತಾರೆ. ಇಬ್ಬರು ಕಿರಿಯ ಕಲಾವಿದರು, ಕೈದಿಯ ವೇಷದಲ್ಲಿರುವ ಒಬ್ಬ ಮತ್ತು ಪೊಲೀಸ್ ವೇಷದಲ್ಲಿರುವ ಮತ್ತೊಬ್ಬ ಡ್ರೆಸ್ಸಿಂಗ್‌ ರೂಂಗೆ ಹೋಗಿ ಅಮಿತಾಭ್ ಅವರಿಗೆ ಪಾವ್ ಭಾಜಿ ಕೊಡುತ್ತಾರೆ. ಊಟ ಮುಗಿದ ನಂತರ ಅಮಿತಾಭ್ ತಿನಿಸನ್ನು ಮತ್ತು ಅದನ್ನು ತಯಾರಿಸಲು ಬಳಸಿದ ಮಸಾಲೆಯನ್ನು ಹೊಗಳುತ್ತಾರೆ. ವಕೀಲರ ವೇಷದಲ್ಲಿರುವ ನಟ ಆ ವೃತ್ತಿಯ ಘನತೆಗೆ ತಕ್ಕಂತೆ ವರ್ತಿಸಿಲ್ಲ ಎಂದು ವಕೀಲರ ಸಂಘ ಆಕ್ಷೇಪಿಸಿದೆ.

ಅಮಿತಾಭ್ ಈ ಹಿಂದೆಯೂ ಇಂಥದ್ದೊಂದು ವಿವಾದದಲ್ಲಿ ಸಿಲುಕಿದ್ದರು. ಜ್ಯುವೆಲ್ಲರಿ ಕಂಪನಿಯೊಂದರ ಜಾಹೀರಾತಿಗಾಗಿ ಮಗಳು ಶ್ವೇತಾ ಬಚ್ಚನ್ ಜೊತೆಗೂಡಿ ನಟಿಸಿದ್ದರು. ಬ್ಯಾಂಕ್ ನೌಕರರನ್ನು ಕೆಟ್ಟದಾಗಿ ತೋರಿಸುವ ಈ ಜಾಹೀರಾತನ್ನು ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಬೆದರಿಕೆ ಹಾಕಿದ್ದವು. ಜಾಹೀರಾತು ನಿರ್ಮಿಸಿದ ಕಂಪನಿಯಿಂದ ಯಾವುದೇ ಚಿನ್ನಾಭರಣ ಖರೀದಿಸದಂತೆ ಬ್ಯಾಂಕ್ ನೌಕರರ ಸಂಘಟನೆಗಳು ಟ್ವಿಟರ್ ಮೂಲಕ ಕರೆ ನೀಡಿದ್ದವು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !