ಮೋದಿ ಪರ ಕಲ್ಯಾಣ್‌ ಹೇಳಿಕೆ ಗೃಹ ಖಾತೆಗೆ ರಾಷ್ಟ್ರಪತಿ ಪತ್ರ

ಭಾನುವಾರ, ಏಪ್ರಿಲ್ 21, 2019
26 °C

ಮೋದಿ ಪರ ಕಲ್ಯಾಣ್‌ ಹೇಳಿಕೆ ಗೃಹ ಖಾತೆಗೆ ರಾಷ್ಟ್ರಪತಿ ಪತ್ರ

Published:
Updated:

ನವದೆಹಲಿ: ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಅವರು ‘ಮೋದಿ ಪುನರಾಯ್ಕೆಯಾಗಬೇಕು’ ಎಂದು ಹೇಳುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಚುನಾವಣಾ ಆಯೋಗದ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. 

ಈ ಪತ್ರದಲ್ಲಿರುವ ವಿಚಾರಗಳನ್ನು ನಿಯಮಗಳ ಅನುಸಾರ ಪರಿಶೀಲನೆ ನಡೆಸುವುದಕ್ಕಾಗಿ ರಾಷ್ಟ್ರಪತಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. 

ರಾಜಕೀಯ ಹೇಳಿಕೆ ನೀಡುವ ಮೂಲಕ ಕಲ್ಯಾಣ್‌ ಸಿಂಗ್‌ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗವು ರಾಷ್ಟ್ರಪತಿಗೆ ಮಂಗಳವಾರ ಪತ್ರ ಬರೆದಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !