ಬುಧವಾರ, ಫೆಬ್ರವರಿ 26, 2020
19 °C
ಆಧಾರ್‌ ಕಾರ್ಡ್‌ನಲ್ಲಿ ಹೆಸರು ಬದಲಿಗೆ ಒತ್ತಾಯ

ರಾಜನಾಥ್‌ ಬೆಂಗಾವಲು ಪಡೆ ಸಂಚಾರಕ್ಕೆ ಅಡ್ಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬೆಂಗಾವಲು ಪಡೆ ಮಂಗಳವಾರ ಸಂಸತ್ ಬಳಿ ಬರುವ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ 35 ವರ್ಷದ ವ್ಯಕ್ತಿ ಮಲಗಿದ್ದ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಶಂಬರ್ ದಾಸ್ ಗುಪ್ತಾ ಹೆಸರಿನ ವ್ಯಕ್ತಿ, ಆಧಾರ್ ಕಾರ್ಡ್‌ನಲ್ಲಿ ತನ್ನ ಹೆಸರನ್ನು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆಂದು ಆಗ್ರಹಿಸಿ ಸಂಸತ್‌ಗೆ ತೆರಳುವ ರಸ್ತೆಯಲ್ಲೇ ಮಲಗಿದ್ದ. ಉತ್ತರ ಪ್ರದೇಶದ ಕುಶಿನಗರ ನಿವಾಸಿಯಾಗಿರುವ ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದೆಂದು’ ಪೊಲೀಸರು ಶಂಕಿಸಿದ್ದಾರೆ. 

ಮಂಗಳವಾರ ಮಧ್ಯಾಹ್ನ 1.25ರ ಸುಮಾರಿಗೆ ರಾಜನಾಥ್ ಸಿಂಗ್ ಅವರ ಬೆಂಗಾವಲು ಪಡೆಯು ಸಂಸತ್ ರಸ್ತೆಗೆ ಬರುತ್ತಿರುವಾಗ ಈ ಘಟನೆ ನಡೆದಿದ್ದು, ವಿಶಂಬರ್ ದಾಸ್ ಗುಪ್ತನನ್ನು ಸಂಸತ್ ಮಾರ್ಗದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು