ಸೋಮವಾರ, ಫೆಬ್ರವರಿ 17, 2020
27 °C

ಸೊಸೆ ಅಪಹರಣ: ರಕ್ಷಿಸಲು ಹೋದ ಮಾವನ ಸಾವು!

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಅಂಬುಲೆನ್ಸ್‌ ಮೂಲಕ ಸೊಸೆಯನ್ನು ಅಪಹರಿಸಲು ಯತ್ನಿಸಿದಾಗ, ಆಕೆಯನ್ನು ರಕ್ಷಿಸಲು ಹೋದ ಮಾವ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೋಲ್ಕತ್ತದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರನ್ನು ಗೋಪಾಲ್ ಪ್ರಾಮಾಣಿಕ್ ಎಂದು ಗುರುತಿಸಲಾಗಿದೆ. 

ಘಟನೆಯ ವಿವರ: ಪರಿಚಿತರೊಬ್ಬರ ಮದುವೆ ಮುಗಿಸಿಕೊಂಡು ಗೋಪಾಲ್ ಪ್ರಾಮಾಣಿಕ್ ಮತ್ತು ಅವರ ಕುಟುಂಬ ಮಂಗಳವಾರ ರಾತ್ರಿ 11.45ರ ಸುಮಾರಿಗೆ ಮನೆಗೆ ಮರಳುತ್ತಿರುವಾಗ ಇಲ್ಲಿನ ಕ್ರಿಸ್ಟೋಫರ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. 

ಗೋಪಾಲ್ ಮತ್ತು ಅವರ ಕುಟುಂಬದ ಸದಸ್ಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಂದ ಅಂಬುಲೆನ್ಸ್‌ನಲ್ಲಿ ಬಂದ ಅಪರಿಚಿತರು, ಸೊಸೆಯನ್ನು ಬಲವಂತವಾಗಿ ಅಂಬುಲೆನ್ಸ್‌ನೊಳಗೆ ಎಳೆದುಕೊಳ್ಳಲು ಯತ್ನಿಸಿದರು. ಸೊಸೆ ಹಿಂದೆಯೇ ಇದ್ದ ಮಾವ ಗೋಪಾಲ್ ತಕ್ಷಣವೇ ಆಕೆಯನ್ನು ರಕ್ಷಿಸಲು ಓಡಿದರು. ಅದೇ ಸಮಯಕ್ಕೆ ಸಂಬಂಧಿಯೊಬ್ಬರು ಅಂಬುಲೆನ್ಸ್‌ ಕಿಟಕಿ ಮೂಲಕ ಚಾಲಕನನ್ನು ಹಿಡಿದರು. 

ಆ ಸಂದರ್ಭದಲ್ಲಿ ಗೋಪಾಲ್ ಅಂಬುಲೆನ್ಸ್‌ಗೆ ಅಡ್ಡಲಾಗಿ ತಡೆಯಲು ಯತ್ನಿಸಿದರು. ಸ್ಥಳದಿಂದ ಪರಾರಿಯಾಗಲು ಚಾಲಕ ಯತ್ನಿಸಿದಾಗ, ಗೋಪಾಲ್ ಮೇಲೆ ಅಂಬುಲೆನ್ಸ್  ಹರಿಯಿತು. ತೀವ್ರವಾಗಿ ಗಾಯಗೊಂಡಿದ್ದ ಗೋಪಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರಾಗಲೇ ಮೃತಪಟ್ಟಿದ್ದರು. 

ಘಟನೆಯ ಬಗ್ಗೆ ಗೋಪಾಲ್ ಅವರ ಕುಟುಂಬದ ಸದಸ್ಯರು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು