ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ವ್ಯವಸ್ಥೆಗೆ ಜರ್ಮನಿ ನೆರವು: ಮರ್ಕೆಲ್‌

ಐದು ವರ್ಷಗಳಲ್ಲಿ ₹ 7900 ಕೋಟಿ ಹೂಡಿಕೆ
Last Updated 2 ನವೆಂಬರ್ 2019, 20:31 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನಗರಗಳಲ್ಲಿ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಮಾಡಲು ₹ 7900 ಕೋಟಿ ನೆರವು ನೀಡುವುದಾಗಿ ಜರ್ಮನಿಯ ಚಾನ್ಸ್‌ಲರ್‌ ಏಂಜೆಲಾ ಮರ್ಕೆಲ್‌ ಶನಿವಾರ ಹೇಳಿದರು.

‘ಭಾರತದ ನಗರಗಳಲ್ಲಿ ಪರಿಸರಸ್ನೇಹಿ ಸಾರಿಗೆ ಯೋಜನೆಗಳ ಜಾರಿಗೆ ಜರ್ಮನಿಯು ಮುಂದಿನ ಐದು ವರ್ಷಗಳಲ್ಲಿ ₹ 7900 ಕೋಟಿ ವೆಚ್ಚ ಮಾಡಲಿದೆ. ತಮಿಳುನಾಡಿನಲ್ಲಿ ಡೀಸೆಲ್‌ ಚಾಲಿತ ಬಸ್‌ಗಳನ್ನು ಬದಲಿಸಿ ಅವುಗಳ ಜಾಗದಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳನ್ನು ಆರಂಭಿಸಲು ₹1582 ಕೋಟಿ ವೆಚ್ಚವೂ ಇದರಲ್ಲಿ ಸೇರಿದೆ’ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮರ್ಕೆಲ್‌ ತಿಳಿಸಿದರು.

ದೆಹಲಿಯ ವಾಯು ಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಡೀಸೆಲ್‌ ಚಾಲಿತ ಎಲ್ಲಾ ಬಸ್ಸುಗಳನ್ನು ರದ್ದುಪಡಿಸಿ, ಅವುಗಳ ಜಾಗದಲ್ಲಿ ವಿದ್ಯುತ್‌ಚಾಲಿತ ಬಸ್ಸುಗಳನ್ನು ಆರಂಭಿಸುವುದು ಅಗತ್ಯ’ ಎಂದರು.

ಮಾತುಕತೆ ಅಗತ್ಯ: ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಃ ಆರಂಭಿಸುವುದು ಅಗತ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT