ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿ ಮೌನವೇಕೆ? ರಾಹುಲ್‌ ಗಾಂಧಿ

7

ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿ ಮೌನವೇಕೆ? ರಾಹುಲ್‌ ಗಾಂಧಿ

Published:
Updated:

ನವದೆಹಲಿ : ‘ಅತ್ಯಾಚಾರವೂ ಸೇರಿದಂತೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ತಳೆದಿದ್ದಾರೆ’ ಎಂದು ಟೀಕಿಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ‘ಮೋದಿ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದೇಶದಲ್ಲಿ ಕಳೆದ ಮೂರು ಸಾವಿರ ವರ್ಷಗಳ ಅವಧಿಯಲ್ಲಿಯೂ ನಡೆದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಇಲ್ಲಿನ ತಲ್ಕಾಟೋರ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಹಿಳಾ ಅಧಿಕಾರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

ಬಿಹಾರ ಮತ್ತು ಉತ್ತರ ಪ್ರದೇಶದ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಸ್ತಾಪಿಸಿದ ರಾಹುಲ್‌ ‘ಬಿಜೆಪಿ ಶಾಸಕರಿಂದ ಪುತ್ರಿಯರನ್ನು ರಕ್ಷಿಸುವುದೇ ಕೇಂದ್ರ ಸರ್ಕಾರದ ಬೇಟಿ ಬಚಾವೊ, ಬೇಟಿ ಪಢಾವೊ ಯೋಜನೆಯ ನಿಜವಾದ ಅರ್ಥವೆಂಬಂತಾಗಿದೆ’ ಎಂದು ಲೇವಡಿ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಬುಲೆಟ್‌ ಟ್ರೇನ್‌, ಏರೋಪ್ಲೇನ್‌, ಶೌಚಾಲಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಮಾತ್ರ ಅವರು ಮಾತನಾಡುವುದಿಲ್ಲ’ ಎಂದರು.

‘ಅಸಮರ್ಥ ಚಾಲಕ ಓಡಿಸುವ ರೈಲಿನಂತಾಗಿದೆ ಭಾರತ’: ‘ನಿರಂಕುಶಮತಿ, ಅಸಮರ್ಥನಾದ ಚಾಲಕನೊಬ್ಬ ವಿಪತ್ತಿನ ಕಡೆಗೆ ಓಡಿಸುತ್ತಿರುವಂತಹ ರೈಲಿನಂತೆ ಭಾರತದ ಸ್ಥಿತಿಯಾಗಿದೆ’ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
**
‘ಅಸಮರ್ಥ ಚಾಲಕ ಓಡಿಸುವ ರೈಲಿನಂತಾಗಿದೆ ಭಾರತ’
‘ನಿರಂಕುಶಮತಿ, ಅಸಮರ್ಥನಾದ ಚಾಲಕನೊಬ್ಬ ವಿಪತ್ತಿನ ಕಡೆಗೆ ಓಡಿಸುತ್ತಿರುವಂತಹ ರೈಲಿನಂತೆ ಭಾರತದ ಸ್ಥಿತಿಯಾಗಿದೆ’ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

‘ಸ್ವಾತಂತ್ರ್ಯ ಲಭಿಸಿ 70 ವರ್ಷ ಗತಿಸಿದ ನಂತರವೂ ಭಾರತವು ನಿಧಾನವಾಗಿ ಚಲಿಸುವ ಪ್ಯಾಸೆಂಜರ್‌ ರೈಲಿನಂತಿದೆ. ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶವು ಒಳ್ಳೆಯ ದಿನಗಳತ್ತ (ಅಚ್ಛೆ ದಿನ್‌) ಓಡುವ, ಮಾಂತ್ರಿಕ ರೈಲಿನಂತಾಗುವುದು’ ಎಂಬುದಾಗಿ 2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಹೇಳಿದ್ದನ್ನೂ ಪ್ರಸ್ತಾಪಿಸಿದ ಅವರು, ‘ದೇಶವನ್ನು ಅವಘಡದತ್ತ ಒಯ್ಯುತ್ತಿರುವ ನಿಮ್ಮ ಮಾಂತ್ರಿಕ ರೈಲಿನ ಬಗ್ಗೆ ಹೇಳಿ ಜನರನ್ನು ಮರಳು ಮಾಡುವ ಕಾಲ ಮುಗಿಯಿತು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !