ಧಾರ್ಮಿಕ ಸ್ವಾತಂತ್ರ್ಯ ಜನತಂತ್ರಕ್ಕೆ ಮುಖ್ಯ: ನಿಕ್ಕಿ

7

ಧಾರ್ಮಿಕ ಸ್ವಾತಂತ್ರ್ಯ ಜನತಂತ್ರಕ್ಕೆ ಮುಖ್ಯ: ನಿಕ್ಕಿ

Published:
Updated:
ಹುಮಾಯೂನ್‌ ಸಮಾಧಿಗೆ ಭೇಟಿ ನೀಡಿದ ಜಸ್ಟರ್‌ ಮತ್ತು ನಿಕ್ಕಿ ಹ್ಯಾಲೆ

ನವದೆಹಲಿ: ಪ್ರಜಾಪ್ರಭುತ್ವದಲ್ಲಿಧಾರ್ಮಿಕ ಸ್ವಾತಂತ್ರ್ಯಕ್ಕೆ ಬಹಳ ಮಹತ್ವವಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಎರಡು ದಿನಗಳ ಪ್ರವಾಸಕ್ಕಾಗಿ ಅವರು ಭಾರತಕ್ಕೆ ಬಂದಿದ್ದಾರೆ.

ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಕೆನೆತ್‌ ಜಸ್ಟರ್‌ ಜತೆಗೆ ಅವರು ಹುಮಾಯೂನ್‌ ಸಮಾಧಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು. 

ಬಳಿಕ, ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. 

‘ರಕ್ಷಣೆ ಮತ್ತು ಸೇನಾ ಸಂಬಂಧಿ ವಿಚಾರಗಳಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ಇನ್ನಷ್ಟು ಗ‌ಟ್ಟಿಗೊಳ್ಳಬೇಕು ಎಂಬುದಕ್ಕೆ ನಿಕ್ಕಿ ಒತ್ತು ನೀಡಿದ್ದಾರೆ. ಭಯೋತ್ಪಾದನೆ ತಡೆ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಉಭಯ ದೇಶಗಳ ಸಹಕಾರ ಇನ್ನಷ್ಟು ಹೆಚ್ಚಬೇಕು ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ಭಾರತ–ಅಮೆರಿಕ ಸಹಭಾಗಿತ್ವ ಬಲವಾಗಿ ಮುಂದುವರಿಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯವು ತಿಳಿಸಿದೆ. 

ಭಾರತ ಮೂಲದ ನಿಕ್ಕಿ ಅವರು ಗುರುವಾರ ದೆಹಲಿಯಲ್ಲಿ ಒಂದು ದೇವಾಲಯ, ಒಂದು ಮಸೀದಿ ಮತ್ತು ಒಂದು ಚರ್ಚ್‌ಗೆ ಭೇಟಿ ನೀಡಲಿದ್ದಾರೆ. 

ಇದು ತಮಗೆ ಮನೆಗೆ ಮರಳಿದಂತಹ ಅನುಭವ ಎಂದು ನಿಕ್ಕಿ ಹೇಳಿದ್ದಾರೆ. ‘ಭಾರತಕ್ಕೆ ಬಂದಿರುವುದು ಬಹಳ ಖುಷಿ ಕೊಟ್ಟಿದೆ. ಮನೆಗೆ ಮರಳುವುದು ಯಾವಾಗಲೂ ಖುಷಿಯ ವಿಚಾರವೇ. ‘ಭಾರಿ ಸೆಖೆ ಇರುವ ಈ ಸಮಯದಲ್ಲಿ ಭಾರತಕ್ಕೆ ಹೋಗುವುದು ಹುಚ್ಚು’ ಎಂದು ನನ್ನ ಅಪ್ಪ–ಅಮ್ಮ ಹೇಳಿದ್ದರು. ಆದರೆ ಈ ಭೇಟಿಗೆ ಭಾರಿ ಮೌಲ್ಯ ಇದೆ’ ಎಂದು ನಿಕ್ಕಿ ಸಂಭ್ರಮಿಸಿದ್ದಾರೆ. 
**

ಭಾರತದ ಬಗೆಗಿನ ಪ್ರೀತಿ, ಗೆಳೆತನದ ಮೇಲಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿ ನಾನು ಇಲ್ಲಿದ್ದೇನೆ.
- ನಿಕ್ಕಿ ಹ್ಯಾಲೆ, ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !