ಅತಿಥಿ ಶಿಕ್ಷಕರಿಂದ ಕಿರುಕುಳ: ರಾಷ್ಟ್ರೀಯ ನಾಟಕ ಶಾಲೆ ವಿದ‌್ಯಾರ್ಥಿನಿ ಆರೋಪ

7

ಅತಿಥಿ ಶಿಕ್ಷಕರಿಂದ ಕಿರುಕುಳ: ರಾಷ್ಟ್ರೀಯ ನಾಟಕ ಶಾಲೆ ವಿದ‌್ಯಾರ್ಥಿನಿ ಆರೋಪ

Published:
Updated:

ನವದೆಹಲಿ: ಅತಿಥಿ ಶಿಕ್ಷಕರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿನಿಯೊಬ್ಬರು ಆರೋಪಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪರೀಕ್ಷೆ ಆಯೋಜಿಸುವ ಸಲುವಾಗಿ ಸಂಸ್ಥೆಗೆ ಬಂದಿದ್ದ ಅತಿಥಿ ಶಿಕ್ಷಕರೊಬ್ಬರು ಅಸಂಬದ್ಧವಾಗಿ ತಮ್ಮ ದೇಹವನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಆಗಸ್ಟ್‌ 01ರಂದು ದೂರು ನೀಡಿದ್ದರು.

ಪರೀಕ್ಷೆ ವೇಳೆ ವಿದ್ಯಾರ್ಥಿನಿಗೆ ದೃಶ್ಯವೊಂದನ್ನು ವಿವರಿಸಿದ್ದ ಶಿಕ್ಷಕ ಅಭಿನಯಿಸುವಂತೆ ಸೂಚಿಸಿದ್ದರು. ಈ ವೇಳೆ ದೇಹ ಸ್ಪರ್ಶಿಸಲಾಗಿದೆ ಎನ್ನಲಾಗಿದ್ದು, ಸಂಸ್ಥೆಗೆ ಬಂದಿದ್ದವರು 62 ವಯಸ್ಸಿನ ನಿವೃತ್ತ ಶಿಕ್ಷಕರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಅರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !