ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ: ಇಂದಿನಿಂದ ನೋಂದಣಿ

Last Updated 17 ಫೆಬ್ರುವರಿ 2019, 18:37 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದ ‘ಪ್ರಧಾನಮಂತ್ರಿ ಶ್ರಮಯೋಗಿ ಮನ್‌ಧನ್ ಯೋಜನೆಗೆ (ಪಿಎಂಎಸ್‌ವೈಎಂ) ಅಸಂಘಟಿತ ವಲಯದ ಕಾರ್ಮಿಕರು ಇಂದಿನಿಂದ ನೋಂದಣಿ ಪ್ರಾರಂಭಿಸಬಹುದು.

ಕಾರ್ಮಿಕರಿಗೆ ತಿಂಗಳಿಗೆ₹3,000 ಪಿಂಚಣಿ ನೀಡುವುದು ಯೋಜನೆಯ ಉದ್ದೇಶ.18ರಿಂದ 40 ವರ್ಷದೊಳಗಿನ ಕಾರ್ಮಿಕರುನೋಂದಣಿ ಮಾಡಿಸಲು ಅರ್ಹರು. ನೋಂದಣಿ ಮಾಡಿಸಿದ ವ್ಯಕ್ತಿಗೆ60 ವರ್ಷತುಂಬಿದ ಬಳಿಕ ಪಿಂಚಣಿ ಪಾವತಿ ಆರಂಭವಾಗುತ್ತದೆ.

ತಿಂಗಳಿಗೆ ₹15 ಸಾವಿರ ಆದಾಯ ಹೊಂದಿರುವ ಅಸಂಘಟಿತ ವಲಯದ ಕಾರ್ಮಿರಿಗೆ ಸಾಮಾಜಿಕ ಭದ್ರತೆ ನೀಡುವ ಪಿಂಚಣಿ ಯೋಜನೆಯನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಜಾರಿಗೊಳಿಸುತ್ತಿದೆ.

ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಸಿಎಸ್‌ಸಿ ಇ–ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿ.’ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ದೇಶಾದ್ಯಂತ 3.13 ಲಕ್ಷ ಸಿಎಸ್ಇ ಕೇಂದ್ರಗಳಿದ್ದು, ಈ ಪೈಕಿ 2.13 ಲಕ್ಷ ಕೇಂದ್ರಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಭಾರತದ ಬಹುತೇಕ ಕಡೆ ಜಾಲ ಹೊಂದಿರುವ ಸಿಇಎಸ್‌, ಈ ಯೋಜನೆಯ ಅತ್ಯುತ್ತಮ ಭಾಗಿದಾರ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೋಂದಣಿ ಹೇಗೆ..?

*ಸಮೀಪದ ಯಾವುದಾದರೂ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬಹುದು

*ನೋಂದಣಿಗೆ ಆಧಾರ್‌ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ/ಜನ್‌ಧನ್‌ ಖಾತೆ ಪಾಸ್‌ಬುಕ್‌ ಬೇಕು

*ಮೊದಲ ತಿಂಗಳ ಹಣವನ್ನು ನಗದು ರೂಪದಲ್ಲೇ ಪಾವತಿಸಿ ರಸೀದಿ ಪಡೆಯಬಹುದು.

*ಅರ್ಜಿ ತುಂಬಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು

*ನೋಂದಣಿ ಮಾಡಿಸಿಕೊಂಡವರಿಗೆ ವಿಶೇಷ ಗುರುತಿನ ಸಂಖ್ಯೆಯಿರುವ ಕಾರ್ಡ್ (ಐಡಿ) ನೀಡಲಾಗುತ್ತದೆ

*ಬ್ಯಾಂಕ್ ಖಾತೆ ಇಲ್ಲದವರು ಬ್ಯಾಂಕ್‌ಗೆ ಹೋಗಬೇಕಿಲ್ಲ. ಸಿಎಸ್‌ಸಿ ಕೇಂದ್ರದಲ್ಲೇ ಖಾತೆ ತೆರೆಯುವ ಸೌಲಭ್ಯ ಇದೆ.

*ಪಿಎಂಎಸ್‌ವೈಎಂ ವೆಬ್‌ಪೋರ್ಟಲ್ ಮೂಲಕ ಅಥವಾ ಆ್ಯಪ್ ಮೂಲಕವೂ ನೋಂದಣಿಗೆ ಅವಕಾಶವಿದೆ.

*ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಿ ಯಾವುದೇ ಪಿಂಚಣಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡವರು ಈ ಯೋಜನೆಗೆ ಅರ್ಹರಲ್ಲ.

ತಿಂಗಳ ಪ್ರೀಮಿಯಂ ಎಷ್ಟು?

ನೋಂದಣಿ ಮಾಡಿಕೊಳ್ಳುವ ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ನಿಗದಿಪಡಿಸಲಾಗಿದೆ. ವ್ಯಕ್ತಿ ಪ್ರತಿ ತಿಂಗಳು ಪಾವತಿಸುವಷ್ಟೇ ಹಣವನ್ನು ಸರ್ಕಾರವೂ ಯೋಜನೆಯಲ್ಲಿ ಅವರ ಖಾತೆಗೆ ತೊಡಗಿಸುತ್ತದೆ. ವಯಸ್ಸು ಹೆಚ್ಚಿದಂತೆಲ್ಲಾ ಪ್ರೀಮಿಯಂ ಕೂಡಾ ಏರಿಕೆಯಾಗುತ್ತದೆ.

18 ವರ್ಷ-₹55

29 ವರ್ಷ - ₹100

40 ವರ್ಷ - 200

ಅಸಂಘಟಿಕ ಕಾರ್ಮಿಕರು ಎಂದರೆ ಯಾರು?

ಮನೆಗೆಲಸದವರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಬಿಸಿಯೂಟ ನೌಕರರು, ಕೂಲಿ ಕಾರ್ಮಿಕರು, ಇಟ್ಟಿಗೆ ಹೊರುವವರು, ಶೂ/ಚಪ್ಪಲಿ ಹೊಲಿಯುವವರು, ಚಿಂದಿ ಆಯುವವರು, ಬಟ್ಟೆ ಶುಚಿಗೊಳಿಸುವವರು, ರಿಕ್ಷಾ ಎಳೆಯುವವರು, ಭೂರಹಿತ ಕಾರ್ಮಿಕರು, ಕೃಷಿ ಕೂಲಿಕಾರರು ಮತ್ತು ಕಟ್ಟಡ ಕಾರ್ಮಿಕರು.

**

ಅಂಕಿ–ಅಂಶ

10 ಕೋಟಿ - 5 ವರ್ಷಗಳಲ್ಲಿ ಪಿಂಚಣಿಗೆ ಒಳಪಡಿಸಲು ಉದ್ದೇಶಿಸಿರುವ ಕಾರ್ಮಿಕರ ಸಂಖ್ಯೆ

3.13 ಲಕ್ಷ - ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT