ಶನಿವಾರ, ಜನವರಿ 25, 2020
22 °C

ಸಂಸತ್‌ ಕ್ಯಾಂಟೀನ್‌ನಲ್ಲಿ ಸಬ್ಸಿಡಿ ಪಡೆಯದಿರಲು ಸಂಸದರ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಊಟ ಮತ್ತು ಉಪಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. 

ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಿಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ ₹17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್‌ ಕ್ಯಾಂಟೀನ್‌ನಲ್ಲಿ ಊಟ ಮತ್ತು ಉಪಹಾರವು ವಾಸ್ತವ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. 

ಈವರೆಗೆ ಸಬ್ಸಿಡಿ ದರದಲ್ಲಿ ಸಂಸದರಿಗೆ ದೊರೆಯುತ್ತಿದ್ದ ಊಟ, ಉಪಹಾರದ ವಿವರ

 

ಬ್ರೆಡ್‌ ಮತ್ತು ಬೆಣ್ಣೆ; ₹6

ಚಪಾತಿ; ₹2

ಚಿಕನ್‌ ಕರಿ; ₹50

ಚಿಕನ್‌ ಕಟ್‌ಲೆಟ್‌ (ಪ್ರತಿ ಪ್ಲೇಟ್‌); ₹41

ತಂದೂರಿ ಚಿಕನ್‌; ₹60

ಕಾಫಿ; ₹5

ಪ್ಲೇನ್‌ ದೋಸೆ; ₹12

ಫಿಶ್‌ ಕರಿ; ₹40

ಹೈದರಾಬಾದಿ ಚಿಕನ್‌ ಬಿರಿಯಾನಿ; 65

ಮಟನ್‌ ಕರಿ; ₹45

ಅನ್ನ; ₹7

ಸೂಪ್‌; ₹14

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು