ಸುಷ್ಮಾ ವಿರುದ್ಧ ಟ್ವಿಟರ್‌ನಲ್ಲಿ ಟ್ರೋಲ್‌

7
ಮುಸಲ್ಮಾನರ ಓಲೈಕೆ ಆರೋಪ

ಸುಷ್ಮಾ ವಿರುದ್ಧ ಟ್ವಿಟರ್‌ನಲ್ಲಿ ಟ್ರೋಲ್‌

Published:
Updated:
ಸುಷ್ಮಾ ಸ್ವರಾಜ್‌

ನವದೆಹಲಿ: ಮುಸಲ್ಮಾನರನ್ನು ಓಲೈಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿರುದ್ಧ ಶನಿವಾರ ಟ್ವಿಟರ್‌ನಲ್ಲಿ ಟ್ರೋಲ್ ಮಾಡಲಾಗಿದೆ.

‘ಮುಸಲ್ಮಾನರನ್ನು ಓಲೈಸದಂತೆ ಸರಿಯಾಗಿ ಬುದ್ಧಿ ಕಲಿಸಿ’ ಎಂದು ಟ್ವೀಟ್‌ ಮಾಡಿದ ವ್ಯಕ್ತಿಯ ಸ್ಕ್ರೀನ್‌ಶಾಟ್‌ನ್ನು ಸುಷ್ಮಾ ಅವರ ಪತಿ ಸ್ವರಾಜ್‌ ಕೌಶಲ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ ?

ಲಖನೌ ಮೂಲದ ಅಂತರ್‌ಧರ್ಮೀಯ ದಂಪತಿಗೆ ಪಾಸ್‌‍ಪೋರ್ಟ್‌ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ, ದೆಹಲಿ ಮೂಲದ ಮುಕೇಶ್‌ ಗುಪ್ತಾ ಎನ್ನುವವರು ಸುಷ್ಮಾ ವಿರುದ್ಧ ಕಿಡಿಕಾರಿದ್ದರು.

‘ಅವರು ಇಂದುರಾತ್ರಿ ಮನೆಗೆ ಬಂದ ವೇಳೆ ನೀವು ಯಾಕೆ ಆಕೆಗೆ ಹೊಡೆಯಬಾರದು ? ಮುಸಲ್ಮಾನರನ್ನು ಓಲೈಸದಂತೆ ಆಕೆಗೆ ಬುದ್ಧಿಕಲಿಸಿ, ಮುಸಲ್ಮಾನರು ಎಂದಿಗೂ ಬಿಜೆಪಿಗೆ ಮತಹಾಕಲ್ಲ’ ಎಂದು ಗುಪ್ತಾ ಎಂಬುವವರು ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !