ಬುಧವಾರ, ಅಕ್ಟೋಬರ್ 16, 2019
21 °C

ಉತ್ತರ ಪ್ರದೇಶ ಈಗ ನಾಥೂರಾಮ ರಾಜ್ಯ: ಅಖಿಲೇಶ್ ಯಾದವ್

Published:
Updated:
prajavani

ಝಾನ್ಸಿ (ಉತ್ತರ ಪ್ರದೇಶ): ‘ಉತ್ತರ ಪ್ರದೇಶವು ರಾಮರಾಜ್ಯವಲ್ಲ, ಅದು ಈಗ ನಾಥೂರಾಮ ರಾಜ್ಯವಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

ಅಕ್ರಮ ಮರಳು ಸಾಗಣೆ ಆರೋಪದಲ್ಲಿನ ಇಲ್ಲಿನ ಪುಷ್ಪೇಂಧರ ಯಾದವ್ ಎಂಬ ಯುವಕನನ್ನು ಪೊಲೀಸರು ಭಾನುವಾರ ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಈ ಎನ್‌ಕೌಂಟರ್‌ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪುಷ್ಪೇಂಧರ ಅವರ ಕುಟುಂಬದ ಸದಸ್ಯರನ್ನು ಅಖೀಲೇಶ್ ಗುರುವಾರ ಭೇಟಿ ಮಾಡಿದ್ದರು. ಭೇಟಿಯ ನಂತರ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.

‘ಈವರೆಗೆ ರಾಜ್ಯದಲ್ಲಿ ಗುಂಪುಹಲ್ಲೆ–ಹತ್ಯೆಗಳು ನಡೆಯುತ್ತಿದ್ದವು. ಅದನ್ನು ನಿಲ್ಲಿಸುವ ಕೆಲಸವನ್ನು ಪೊಲೀಸರು ಮಾಡಲಿಲ್ಲ. ಬದಲಿಗೆ ಪೊಲೀಸರೇ ಈಗ ಗುಂಪುಹತ್ಯೆ ನಡೆಸುತ್ತಿದ್ದಾರೆ’ ಎಂದು ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post Comments (+)