ಯುಟ್ಯೂಬ್‌ನಲ್ಲಿ ದಾಖಲೆ ಬರೆದ ‘ಜನ ಗಣ ಮನ’

7

ಯುಟ್ಯೂಬ್‌ನಲ್ಲಿ ದಾಖಲೆ ಬರೆದ ‘ಜನ ಗಣ ಮನ’

Published:
Updated:
Deccan Herald

ನವದೆಹಲಿ: ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಪಿಯಾನೊದಲ್ಲಿ ನುಡಿಸಿರುವ ವಿಡಿಯೊವನ್ನು ಯುಟ್ಯೂಬ್‌ನಲ್ಲಿ 7.2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ಅತಿ ಹೆಚ್ಚು ವೀಕ್ಷಣೆಯಾದ ರಾಷ್ಟ್ರಗೀತೆಗಳ ಹಿಂದಿನ ದಾಖಲೆಗಳನ್ನು ಇದು ಮುರಿದಿದೆ. 

ಮುಂಬೈ ಮೂಲದ ಪಿಯಾನೊ ವಾದಕ ಶಯನ್‌ ಇಟಾಲಿಯಾ ಅವರು ಪಿಯಾನೊ ನುಡಿಸಿದ್ದು, ಫರ್ಹಾದ್ ವಿಜಯ್ ಅರೋರಾ ನಿರ್ದೇಶಿಸಿದ್ದಾರೆ. ಜುಲೈ 29ರಂದು ಯುಟ್ಯೂಬ್‌ಗೆ ಈ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ. 

‘ಮೊದಲ ದಿನ, 50 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು. ಭಾವನಾತ್ಮಕವಾದ ರಾಷ್ಟ್ರಗೀತೆಯಿಂದ ಇಡೀ ಭಾರತವನ್ನು ಒಂದುಗೂಡಿಸಬಹುದಾದ ಅವಕಾಶ ದೊರಕಿದೆ ಎನಿಸಿತು’ ಎಂದು ಇಟಾಲಿಯಾ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !