ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ನೋಟಿಸ್‌

7
ನವೋದಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ವರದಿ ಕೇಳಿದ ಎನ್‌ಎಚ್ಆರ್‌ಸಿ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ನೋಟಿಸ್‌

Published:
Updated:
Prajavani

ನವದೆಹಲಿ: 2013 ರಿಂದ 2017ರ ಅವಧಿಯಲ್ಲಿ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ 49 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್ಆರ್‌ಸಿ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ (ಎಚ್‌ಆರ್‌ಡಿ) ಮಂಗಳವಾರ ನೋಟಿಸ್‌ ನೀಡಿದೆ.

ಮೃತಪಟ್ಟವರಲ್ಲಿ ಏಳು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಸಹಪಾಠಿಗಳು ಅಥವಾ ಶಾಲಾ ಸಿಬ್ಬಂದಿ ಇವರ ಮೃತದೇಹಗಳನ್ನು ಪತ್ತೆಮಾಡಿದ್ದಾರೆ ಎಂದು ಆಯೋಗ ಹೇಳಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಮಾಧ್ಯಮಗಳ ವರದಿ ಆಧರಿಸಿ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಮೃತರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ದಲಿತ ಹಾಗೂ ಬುಡಕಟ್ಟು ವರ್ಗಗಳಿಗೆ ಸೇರಿದವರು. ಅವರಲ್ಲಿ ಹೆಚ್ಚಿನವರು ಗಂಡು ಮಕ್ಕಳು ಎಂದು ಆಯೋಗ ಹೇಳಿದೆ. 

ನವೋದಯ ವಸತಿ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನೆರವಾಗುವಂತೆ ನುರಿತ ಆಪ್ತಸಮಾಲೋಚಕರನ್ನು ನೇಮಿಸಲಾಗಿದೆಯೇ?, ವಿದ್ಯಾರ್ಥಿಗಳನ್ನು ಒಂಟಿಯಾಗಿ ಕೊಠಡಿಯಲ್ಲಿ ಬಿಡದಂತೆ ನಿಗಾ ವಹಿಸುವ ಸಿಬ್ಬಂದಿ ವರ್ಗವಿದೆಯೇ?, ದೂರವಾಣಿ ಮೂಲಕ ಆಪ್ತಸಮಾಲೋಚನೆಗೆ ಅವಕಾಶವಿದೆಯೇ? ಎನ್ನುವ ಕುರಿತು ಆರು ವಾರದೊಳಗಾಗಿ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !