ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು ಮಾರುಕಟ್ಟೆಯಲ್ಲಿ ಗಮನ ಸೆಳೆದ 65 ಕೆ.ಜಿ ತೂಕದ ಹಲಸಿನ ಹಣ್ಣು!

Last Updated 27 ಏಪ್ರಿಲ್ 2018, 11:02 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ತಾಲೂಕಿನ ಚೇಳೂರು ಮಾರುಕಟ್ಟೆಯಲ್ಲಿ ಬರೋಬ್ಬರಿ 65ಕೆ.ಜಿ ತೂಕದ ಹಲಸಿನ ಹಣ್ಣು ದಾಖಲೆ ಬೆಲೆಗೆ ಮಾರಾಟವಾಗಿರುವುದು ಸುದ್ದಿಯಾಗಿದೆ.

ಗಡಿಯಂಕನಹಳ್ಳಿಯ ರೈತ ನಟರಾಜ್‌ ಎನ್ನುವವರು ತಂದಿದ್ದ ಈ ಹಣ್ಣು ₹ 1200 ಕ್ಕೆ ಮಾರಾಟವಾಗಿದ್ದು, ಶತಮಾನಗಳ ಇತಿಹಾಸವಿರುವ ಈ ಮಾರುಕಟ್ಟೆಯಲ್ಲಿ ಇಷ್ಟು ತೂಕದ ಹಣ್ಣು ಮಾರಾಟವಾಗಿರುವುದು ಇದೇ ಮೊದಲು ಎನ್ನಲಾಗಿದೆ. 

ಇಲ್ಲಿ ಮಾರ್ಚ್‌ ವೇಳೆಗೆ ಮಾವು-ಹಲಸು ಹಣ್ಣಿನ ಸಂತೆ ಆರಂಭವಾಗುತ್ತದೆ. ಇದು ರಾಜ್ಯದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಹೆಸರುವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT