ಭಾನುವಾರ, ಜೂನ್ 7, 2020
27 °C

ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಚೆನ್ನೈ: ತನ್ನ ಸಂಸ್ಥೆಯಲ್ಲಿ ಮುಸಲ್ಮಾನ ಉದ್ಯೋಗಿಗಳಿಲ್ಲ ಎಂಬ ಒಕ್ಕಣೆಯಿರುವ ಸಂದೇಶವನ್ನು ರವಾನಿಸಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದ 32 ವರ್ಷದ ವ್ಯಕ್ತಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

’ಜೈನ ಬೇಕರಿ ಮತ್ತು ಕನ್ಫೆಕ್ಷನರಿಸ್’‌ ಮಾಲೀಕ ಪ್ರಶಾಂತ್‌ ತನ್ನ ಉತ್ಪನ್ನಗಳಿಗೆ ಆನ್‌ಲೈನ್‌ ಪ್ರಚಾರ ನೀಡಿದ್ದ. ‘ಈ ಉತ್ಪನ್ನ
ಗಳನ್ನು ಜೈನ ಸಮುದಾಯದವರು ತಯಾರಿಸಿದ್ದಾರೆಯೇ ಹೊರತು ಮುಸ್ಲಿಮರಲ್ಲ’ ಎಂಬ ಒಕ್ಕಣೆಯಿರುವ ಜಾಹೀರಾತನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದ.

ಚೆನ್ನೈನ ಪಶ್ಚಿಮ ಮಹಾಬಲಂ ಪ್ರದೇಶದಲ್ಲಿರುವ ಈ ಬೇಕರಿಯಲ್ಲಿ ಮುಸ್ಲಿಂ ಸಮುದಾಯದವರು ಆಹಾರ ತಯಾರಿಸುತ್ತಾರೆ ಎಂಬ ವದಂತಿ ಹರಡಿದ್ದರಿಂದ ಈ ರೀತಿ ಮಾಡಿರುವುದಾಗಿ ಸ್ಪಷ್ಟನೆ ನೀಡಲಾಗಿದೆ.

ಮುಸ್ಲಿಮರ ಬಗ್ಗೆ ಪೂರ್ವಗ್ರಹ ಪೀಡಿತ ಸಂದೇಶ ಕಳುಹಿಸಿದ ಆರೋಪದಲ್ಲಿ ಆತನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು