ಗುರುವಾರ , ನವೆಂಬರ್ 21, 2019
22 °C

ಎನ್‌ಆರ್‌ಸಿ ಗಡುವು ವಿಸ್ತರಣೆ

Published:
Updated:

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿ ಪ್ರಕಟಣೆಗೆ ನೀಡಿದ್ದ ಗಡುವನ್ನು ಸುಪ್ರೀಂ ಕೋರ್ಟ್ ಒಂದು ತಿಂಗಳು ವಿಸ್ತರಿಸಿದೆ. ಜುಲೈ 31ರಂದು ನಿಗದಿಯಾಗಿದ್ದ ಅಂತಿಮ ದಿನಾಂಕ ಆಗಸ್ಟ್ 31ರವರೆಗೆ ವಿಸ್ತರಣೆಯಾಗಿದೆ. 

ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹೆಸರುಗಳ ಪೈಕಿ ಶೇ 20ರಷ್ಟನ್ನು ಮರು ಪರಿಶೀಲನೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪಟ್ಟಿಗೆ ಅಕ್ರಮವಾಗಿ ಸೇರ್ಪಡೆ ಅಥವಾ ಪಟ್ಟಿಯಿಂದ ಹೊರಗುಳಿದಿರುವುದನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರಗಳು ಮರುಪರಿಶೀಲನೆಗೆ ಮನವಿ ಮಾಡಿದ್ದವು. 

ಅಸ್ಸಾಂ ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರು ಒದಗಿಸಿದ್ದ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ಆರ್‌.ಎಫ್. ನಾರಿಮನ್ ಅವರಿದ್ದ ಪೀಠ ಆದೇಶ ಹೊರಡಿಸಿತು. 

ಪ್ರತಿಕ್ರಿಯಿಸಿ (+)