ಎನ್‌ಆರ್‌ಸಿ ವಿರೋಧಿಗಳಿಂದ ಅಪಪ್ರಚಾರ: ಸೋನೊವಾಲ್‌

7

ಎನ್‌ಆರ್‌ಸಿ ವಿರೋಧಿಗಳಿಂದ ಅಪಪ್ರಚಾರ: ಸೋನೊವಾಲ್‌

Published:
Updated:

ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ (ಎನ್‌ಆರ್‌ಸಿ) ಯಾವುದೇ ವಿದೇಶಿಯರ ಹೆಸರು ಸೇರದಂತೆ ನೋಡಿಕೊಳ್ಳಲು ಅಸ್ಸಾಂ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಬುಧವಾರ ಹೇಳಿದ್ದಾರೆ.

ಇದೇ ವೇಳೆ, ಅಸ್ಸಾಂನಲ್ಲಿ ವಾಸವಿರುವ ಭಾರತದ ಯಾವುದೇ ವ್ಯಕ್ತಿಯ ಹೆಸರು ಎನ್‌ಆರ್‌ಸಿಯಲ್ಲಿ ಬಿಟ್ಟುಹೋಗದಂತೆ ನೋಡಿಕೊಳ್ಳುವಲ್ಲಿ ತಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತೀಯ ನಾಗರಿಕರ ದೋಷ ರಹಿತ ಪಟ್ಟಿ ತಯಾರಿಸುವ ಕಾರ್ಯಕ್ಕೆ ರಾಜ್ಯದ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಈ ಹಿಂದೆ ರಾಷ್ಟ್ರೀಯ ಕಾರ್ಯಕ್ರಮಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂಸಾಚಾರ ನಡೆದ ಉದಾಹರಣೆಗಳಿವೆ. ಆದರೆ ಇಂದು ಅಸ್ಸಾಂನಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಶಾಂತಿಯುತವಾಗಿ ನಡೆದಿದೆ. ಎನ್‌ಆರ್‌ಸಿ ಕರಡು ಪ್ರಕಟಗೊಂಡಾಗಿನಿಂದಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿರುವುದರ ನಡುವೆಯೂ ರಾಜ್ಯ ಶಾಂತಿಯುತವಾಗಿಯೇ ಉಳಿದಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !