ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭಾರತಕ್ಕಿಂತ ಪಾಕಿಸ್ತಾನದ ಬಗ್ಗೆ ಹೆಚ್ಚು ಮಾತಾಡುತ್ತಾರೆ: ಕಪಿಲ್‌ ಸಿಬಲ್‌

Last Updated 4 ಏಪ್ರಿಲ್ 2019, 18:16 IST
ಅಕ್ಷರ ಗಾತ್ರ

‘ಪ್ರಧಾನಮಂತ್ರಿಯವರ ಅಚ್ಛೇ ದಿನ್‌ ಪ್ರಣಾಳಿಕೆಯು ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಡುಗಡೆಯಾಗುತ್ತದೆಯೇ? ಅಚ್ಛೇ ದಿನ್ ಬಂದಿದೆ ಎಂದು ತಮ್ಮ ಮಧ್ಯೆಯೇ ಮಾತಾಡಿಕೊಳ್ಳಲುಬಿಜೆಪಿ ಕಾರ್ಯಕರ್ತರು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಿರುವಾಗ ಅದನ್ನು ಅವರು ಜನರಿಗೆ ಹೇಳಲು ಹೇಗೆ ಸಾಧ್ಯ?

ಅಖಿಲೇಶ್ ಯಾದವ್,ಸಮಾಜವಾದಿ ಪಕ್ಷದ ಮುಖ್ಯಸ್ಥ

***

ದೇಶದ್ರೋಹ ವಿರೋಧಿ ಕಾನೂನು ಹಾಗೂ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ತೆಗೆದುಹಾಕುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿರುವುದನ್ನು ಗಮನಿಸಿದರೆ, ಅದು ಪ್ರತ್ಯೇಕವಾದಿಗಳು ಹಾಗೂ ದೇಶವಿರೋಧಿ ಶಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ ಎನಿಸುತ್ತಿದೆ

ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

***

ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಮತ ನೀಡಿದರೆ, ಕಾಶ್ಮೀರದ ಯುವಕರ ಮೇಲೆ 2015ರ ಬಳಿಕ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವ ಹಾಗೂ ಎಫ್‌ಐಆರ್ ರದ್ದುಪಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕಾಶ್ಮೀರದ ಜನರು ಮುಕ್ತವಾಗಿ ಜೀವಿಸುವ ವಾತಾವರಣ ಸೃಷ್ಟಿಸುವುದೇ ನಮ್ಮ ಉದ್ದೇಶ

ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ

***

ಪ್ರಧಾನಿ ಕಚೇರಿಯ ಘನತೆಯನ್ನು ನರೇಂದ್ರ ಮೋದಿ ಅವರಷ್ಟು ತಗ್ಗಿಸಿದವರು ಯಾರೂ ಇಲ್ಲ. ಅವರು ನೀಡುವಂತಹ ಹೇಳಿಕೆಗಳನ್ನು ಯಾವ ಪ್ರಧಾನಿಯೂ ನೀಡಿರಲಿಲ್ಲ. ಮೋದಿ ಅವರು ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಹಿಂದೂಸ್ತಾನದ ಪ್ರಧಾನಿಯಾಗಿದ್ದರೂ, ಪಾಕಿಸ್ತಾನದತ್ತಲೇ ಅವರ ಗಮನ ಕೇಂದ್ರೀಕೃತವಾಗಿದೆ

ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT