ಆನ್‌ಲೈನ್‌ನಲ್ಲಿಯೇ ಎಫ್‌ಐಆರ್‌ ನೋಂದಣಿಗೆ ಅವಕಾಶ

7

ಆನ್‌ಲೈನ್‌ನಲ್ಲಿಯೇ ಎಫ್‌ಐಆರ್‌ ನೋಂದಣಿಗೆ ಅವಕಾಶ

Published:
Updated:

ನವದೆಹಲಿ: ಏಳು ಅಪರಾಧಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿಯೇ ಎಫ್‌ಐಆರ್‌ ದಾಖಲಿಸುವ ಮತ್ತು ನಿರ್ದಿಷ್ಟ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಪಡೆಯುವ ಅವಕಾಶವು ನಾಗರಿಕರಿಗೆ ದೊರೆಯಲಿದೆ.

ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳಲ್ಲಿ ನಾಗರಿಕ ಕೇಂದ್ರಿತ ಪೋರ್ಟಲ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಮನೆ ಕೆಲಸಗಾರರು, ಚಾಲಕರು ಅಥವಾ ಬಾಡಿಗೆದಾರರ ಹಿನ್ನೆಲೆ ತಿಳಿದುಕೊಳ್ಳಲು ಸಹ ಈ ಪೋರ್ಟಲ್‌ ಅನ್ನು ನಾಗರಿಕರು ಸಂಪರ್ಕಿಸಬಹುದು. ಪೊಲೀಸರು ಇಂತಹ ನೌಕರರ ಅಥವಾ ಬಾಡಿಗೆದಾರರ ಪೂರ್ವಾಪರ ತಿಳಿದುಕೊಂಡು ಮಾಹಿತಿ ನೀಡುತ್ತಾರೆ. ಅಲ್ಲದೆ, ಕಳೆದುಹೋದ ಅಥವಾ ದೊರೆತ ವಸ್ತುಗಳು, ಸಾರ್ವಜನಿಕ ಸಮಾರಂಭ ಆಯೋಜಿಸಲು ಅನುಮತಿ ಪಡೆಯಲು ಮುಂತಾದ ಉದ್ದೇಶಗಳಿಗೂ ಈ ಪೋರ್ಟಲ್‌ ಬಳಸಬಹುದಾಗಿದೆ.

ಪೊಲೀಸ್‌ ವ್ಯವಸ್ಥೆಯನ್ನು ‘ಸ್ಮಾರ್ಟ್‌’ ಮಾಡುವ ಉದ್ದೇಶದಿಂದ ಈ ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !