ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ವಿಳಂಬ ಮಾಡಿದ್ದು ಯಾಕೆ?

ಮಂಗಳವಾರ, ಮಾರ್ಚ್ 19, 2019
20 °C

ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ವಿಳಂಬ ಮಾಡಿದ್ದು ಯಾಕೆ?

Published:
Updated:

ಇಸ್ಲಾಮಾಬಾದ್: ಪಾಕಿಸ್ತಾನದ ವಶದಲ್ಲಿರುವ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದರು.

ಈ ನಡುವೆ ಪಾಕಿಸ್ತಾನದ ಪ್ರಜೆಯೊಬ್ಬರು ಅಭಿನಂದನ್ ಅವರನ್ನು ಶೀಘ್ರ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಹೇಳಿ  ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವರ್ಧಮಾನ್ ಅವರು ನಮ್ಮ ದೇಶದ ಮೇಲೆ ದಾಳಿ ಮಾಡಿ ತಪ್ಪೆಸಗಿದ್ದಾರೆ. ಹಾಗಾಗಿ ಅವರ ವಿಚಾರಣೆ ಮಾಡಬೇಕು ಎಂದು ಅರ್ಜಿದಾರ ಹೈಕೋರ್ಟ್‍ಗೆ ಮನವಿ ಮಾಡಿದ್ದಾರೆ.

ಭಾರತೀಯ ವಾಯುಪಡೆಯ ಪೈಲಟ್‍ನ್ನು ಹಸ್ತಾಂತರಿಸುವ ಪಾಕ್ ಸರ್ಕಾರದ ನಿರ್ಧಾರವನ್ನು ತಡೆಯಬೇಕೆಂದು ಮನವಿ ಮಾಡಿರುವ ಅರ್ಜಿದಾರ, ಅಭಿನಂದನ್ ಪಾಕಿಸ್ತಾನಕ್ಕೆ ಬಾಂಬ್ ಹಾಕಲು ಗಡಿ ದಾಟಿ ಬಂದಿದ್ದಾರೆ. ಹಾಗಾಗಿ ಅವರು ಅಪರಾಧ ಮಾಡಿದ್ದು, ಪಾಕ್ ನ್ಯಾಯಾಲಯ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮಿನ್ಹಲ್ಲಾ, ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ಇಮ್ರಾನ್ ಖಾನ್ ಅವರದ್ದಾಗಿತ್ತು. ಪಾಕಿಸ್ತಾನದ ಸಂಸತ್‍ನಲ್ಲಿ ಇಮ್ರಾನ್ ಖಾನ್ ಈ ನಿರ್ಧಾರ ಘೋಷಿಸಿದಾಗ ಅಲ್ಲಿ ಯಾರೊಬ್ಬರೂ ವಿರೋಧ ಸೂಚಿಸಿರಲಿಲ್ಲ. ಇದು ರಾಜತಾಂತ್ರಿಕ ವಿಚಾರ ಆಗಿರುವುದರಿಂದ ನಾವು ಸಂಸತ್‍ನ್ನು ಗೌರವಿಸಬೇಕು ಎಂದು ಹೇಳಿ ಅರ್ಜಿ ವಜಾ ಮಾಡಿದ್ದರು.

ಅಭಿನಂದನ್ ಅವರನ್ನು ಸಂಜೆ 4ರ ಹೊತ್ತಿಗೆ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಪಾಕ್ ಮೂಲಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 78

  Happy
 • 15

  Amused
 • 5

  Sad
 • 2

  Frustrated
 • 11

  Angry

Comments:

0 comments

Write the first review for this !